ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಹದಗೆಟ್ಟ ರಸ್ತೆಯಿಂದ ಕಂಗಾಲಾದ ವಾಹನ ಸವಾರರು

ನವಲಗುಂದ : ಸತತ ಮಳೆಯಿಂದಾಗಿ ಈಗಾಗಲೇ ಧಾರವಾಡ ಜಿಲ್ಲೆಯಲ್ಲಿನ ಎಲ್ಲಾ ಕಡೆಗಳಲ್ಲೂ ರಸ್ತೆಗಳು ಹಾಳಾಗಿ ಹೋಗಿದ್ದು ಜನರು ಪರದಾಟ ನಡೆಸುವಂತಾಗಿದೆ. ಇಂತಹ ರಸ್ತೆಗಳಿಗೆ ಉತ್ತಮ ನಿದರ್ಶನ ಅಂದ್ರೆ ಅದು ಧಾರವಾಡದಿಂದ ನವಲಗುಂದದ ಕಡೆ ಹೋಗೋ ರಸ್ತೆ.

ಈ ಬಾರಿ ಸುರಿದ ಬಾರಿ ಮಳೆಯಿಂದಾಗಿ ಬ್ಯಾಹಟ್ಟಿಯಿಂದ ಹೆಬಸೂರಿನವರೆಗೂ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ಇದರಿಂದ ಈ ರಸ್ತೆಯಲ್ಲಿ ಸಂಚರಿಸೋ ವಾಹನ ಸಂಚಾರರಿಗೆ ಇದು ಕಂಟಕವಾಗಿ ಕಾಡುತ್ತಿದೆ. ಇನ್ನೂ ಮಳೆಗಾಲ ಮುಗಿದರು ಸಹ ಇದುವರೆಗೂ ರಸ್ತೆ ಕಾಮಗಾರಿಯನ್ನು ಮಾಡದೆ ಬಿಟ್ಟಿರೋದು ಅಲ್ಲಿನ ಗ್ರಾಮದ ಜನರಿಗೂ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಅಷ್ಟೇ ಅಲ್ಲದೆ ಈಗಾಗಲೇ ಈ ರಸ್ತೆಯಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿದ ಉದಾಹರಣೆ ಕೂಡ ಇದ್ದು, ದೊಡ್ಡ ದುರ್ಘಟನೆ ನಡೆಯುವ ಮುನ್ನ ಸಂಬಂಧ ಪಟ್ಟ ಜನಪ್ರತಿನಿದಿನಗಳಾಗಲಿ, ಅಧಿಕಾರಿಗಳಾಗಲಿ ಎಚ್ಚೆತ್ತು ಸುಸರ್ಜಿತ ರಸ್ತೆ ಮಾಡುವಲ್ಲಿ ಮುಂದಾಗಬೇಕಿದೆ...

Edited By : Manjunath H D
Kshetra Samachara

Kshetra Samachara

03/11/2020 07:52 pm

Cinque Terre

23.43 K

Cinque Terre

0

ಸಂಬಂಧಿತ ಸುದ್ದಿ