ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಮಸ್ಯೆ ಹೇಳಿಕೊಂಡ ಪೌರಕಾರ್ಮಿಕರು,ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಶೆಟ್ಟರ್

ಹುಬ್ಬಳ್ಳಿ: ನೇರ ನೇಮಕಾತಿ, ನೇರ ವೇತನಕ್ಕೆ ಆಗ್ರಹಿಸಿ ಹುಬ್ಬಳ್ಳಿ ಧಾರವಾಡ ಪೌರ ಕಾರ್ಮಿಕರಿಂದ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ನಿವಾಸದ ಎದುರು ಪ್ರತಿಭಟನೆ ನಡೆಸಲಾಯಿತು.

ನೂರಾರು ಪೌರಕಾರ್ಮಿಕರು ಶೆಟ್ಟರ್ ನಿವಾಸದ ಎದುರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ನೇರ ನೇಮಕಾತಿ ಮಾಡಿಸುವುದಾಗಿ ಕೆಲ ಕಾರ್ಮಿಕರ ಮುಖಂಡರು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ದೂರಿದರು.

ಇನ್ನೂ ಈ ಕುರಿತು ಪ್ರತಿಕ್ರಿಯೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್, ಕಾರ್ಮಿಕರಿಂದ ಹಣ ಸೂಲಿಗೆ ಮಾಡುತ್ತಿರುವ ವಿಚಾರ ಗಮನಕ್ಕೆ‌ ಬಂದಿದೆ.ಪೌರ ಕಾರ್ಮಿಕರ ಸಮಸ್ಯೆ ಇದ್ದರೆ ನೇರವಾಗಿ ಭೇಟಿಯಾಗುವಂತರ ಸಲಹೆ ನೀಡಿದರು.

ಮಧ್ಯವರ್ತಿಗಳಿಗೆ ಹಣ ನೀಡಬೇಡಿ. ಶೀಘ್ರದಲ್ಲಿಯೇ ಪೌರ ಕಾರ್ಮಿಕರ ನೇರ ನೇಮಕಾತಿ ಹಾಗೂ ನೇರ ವೇತನ ಜಾರಿ ಮಾಡುವ ಭರವಸೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ನೀಡಿದರು.

Edited By : Manjunath H D
Kshetra Samachara

Kshetra Samachara

09/10/2020 02:08 pm

Cinque Terre

25.69 K

Cinque Terre

3

ಸಂಬಂಧಿತ ಸುದ್ದಿ