ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಅಂಗನವಾಡಿ ಕಟ್ಟಡ ಶಿಥಿಲ: ಹೆಚ್ಚಿದ ಹಾವಿನ ಕಾಟ

ಕುಂದಗೋಳ: ಇಲ್ಲೊಂದು ಪಟ್ಟಣದಲ್ಲಿ ಮುದ್ದು ಮಕ್ಕಳು ತೊದಲು ನುಡಿ ಕಲಿಯಲು ಸಿದ್ಧರಿದ್ದಾರೆ. ಕಲಿಸಲು ಶಿಕ್ಷಕರು ಇದ್ದಾರೆ ಆದ್ರೆ ಕಲಿಕೆಗೆ ಪೂರಕವಾದ ವಾತಾವರಣ ಇಲ್ಲ ಎಂಬುದೇ ಬೇಜಾರಿನ ಸಂಗತಿ ನೋಡಿ.

ಕುಂದಗೋಳ ಪಟ್ಟಣದ ಅಂಗನವಾಡಿ ನಂಬರ್ 8 ಕ್ಕೆ ಸೂಕ್ತ ಕಟ್ಟಡ ಇಲ್ಲದ ಕಾರಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಮುಂದಿನ ಖಾಲಿ ಕೊಠಡಿಯಲ್ಲಿ ಸದ್ಯ ಬೋಧನೆ ಮುಂದುವರೆಸಿದೆ.

ಆದ್ರೆ ಮಳೆಗಾಲದಲ್ಲಿ ಆ ಕಟ್ಟಡ ಸೋರುತ್ತಿದ್ದು ಸುತ್ತ ಮುತ್ತ ಅವ್ಯವಸ್ಥೆ ವಾತಾವರಣ ಇರುವ ಕಾರಣ ಹಾವುಗಳ ಕಾಟ ಅತಿಯಾಗಿದೆ. ಈಗಾಗಲೇ ಹಲವು ಸಾರಿ ಅಂಗನವಾಡಿ ಬಳಿ ಹಾವುಗಳ ದರ್ಶನ ಸಹ ಆಗಿದೆ.

ಹೀಗಾಗಿ ಮಕ್ಕಳಿಗೆ ಸುಸಜ್ಜಿತ ಕಟ್ಟಡದ ಅವಶ್ಯಕತೆ ಇದ್ದು ಅದೇ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಿಂದೆ ಪಾಳು ಬಿದ್ದ ಕಟ್ಟಡ ಕೆಡವಿ ನೂತನ ಅಂಗನವಾಡಿ ಕಟ್ಟಲು ಪಟ್ಟಣ ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಯೋಜನಾಧಿಕಾರಿಗಳು ಯೋಜನೆ ರೂಪಿಸಿದ್ರೂ ಅದೂ ಕೈಗೂಡಿಲ್ಲ..

ಈ ಕಾರಣ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಮಕ್ಕಳ ಜಾಗೃತಿಯ ಬಗ್ಗೆ ಹದ್ದಿನ ಕಣ್ಣಿಟ್ಟು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಟ್ಟಾರೆ ಹಾವುಗಳ ಕಾಟ, ಹಳೇ ಶಿಥಿಲಾವಸ್ಥೆ ಕಟ್ಟಡವಾದ ಅಂಗನವಾಡಿ ನಂಬರ್ 8ಕ್ಕೆ ಜನಪ್ರತಿನಿಧಿಗಳು ಹೊಸ ಕಟ್ಟಡದ ಭಾಗ್ಯ ಶೀಘ್ರವೇ ನೀಡಬೇಕಿದೆ.

ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್, ಕುಂದಗೋಳ

Edited By : Manjunath H D
Kshetra Samachara

Kshetra Samachara

13/07/2022 04:25 pm

Cinque Terre

30.77 K

Cinque Terre

2

ಸಂಬಂಧಿತ ಸುದ್ದಿ