ಕುಂದಗೋಳ: ನಿತ್ಯ ಸಾರಿಗೆ ಬಸ್‌ಗೆ ಜೋತು ಬಿದ್ದು ಪ್ರಯಾಣ ಬೆಳೆಸುವ ಮಕ್ಕಳು, ಹಳ್ಳಿಯ ಬಸ್‌ಗೆ ನುಗ್ಗಿ ಸಿಟ್ ಹಿಡಿಯುವ ಜನರು ಇದು ಕುಂದಗೋಳ ಬಸ್‌ಗಾಗಿ ಜನರು ಪಡುವ ಪರಿಪಾಟಲು. ವಾಣಿಜ್ಯ ನಗರಿ ಹುಬ್ಬಳ್ಳಿಗೆ ಸಮೀಪದ ಕುಂದಗೋಳ ತಾಲೂಕಿನಲ್ಲಿ ಸಾರಿಗೆ ಬಸ್‌ಗಳ ಕೊರತೆಯನ್ನು ಶಾಲಾ ಕಾಲೇಜು ವಿದ್ಯಾರ್ಥಿಗಳು ಅಷ್ಟೇ ಯಾಕೆ ಪ್ರಯಾಣಿಕರು ಅನುಭವಿಸುವಂತಾಗಿದೆ.
ನಿತ್ಯ ಸಾಯಂಕಾಲ ಈ ಹಳ್ಳಿ ಬಸ್‌ಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಶಾಲಾ ಕಾಲೇಜು ವಿದ್ಯಾರ್ಥಿಗಳು ಪ್ರಯಾಣಿಕರು ಪ್ರಯಾಣ ಮಾಡ್ತಾರೆ, ಅದರಲ್ಲೂ ಬಸ್ ಹತ್ತಲು ಸ್ಪರ್ಧೆಗೆ ಇಳಿದಿರುವಂತೆ ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕುಂದಗೋಳ ಬಸ್ ನಿಲ್ದಾಣದಲ್ಲಿ ಇತ್ತೀಚೆಗೆ ಕಳ್ಳರ ಹಾವಳಿ ಸಹ ಜೋರಾಗಿದೆ. ಈ ಬಗ್ಗೆ ಸಾರಿಗೆ ನಿಯಂತ್ರಕರನ್ನು ಕೇಳಿದ್ರೆ ಹೇಳೋದು ಹೀಗೆ.
ಒಟ್ಟಾರೆ ಕುಂದಗೋಳ ಬಸ್ ನಿಲ್ದಾಣದ ಸಾರಿಗೆ ವ್ಯವಸ್ಥೆ ಸುಧಾರಿಸಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ಸೇವೆ ಸಿಗಲಿ ಎಂಬುದು ಪಬ್ಲಿಕ್ ನೆಕ್ಸ್ಟ್ ಆಶಯ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
28/06/2022 05:53 pm