ನವಲಗುಂದ: ಕಿಸೆಗಳ್ಳರು ವೃದ್ಧರೊಬ್ಬರ ಜೇಬನ್ನು ಕತ್ತರಿಸಿ, ಸುಮಾರು ನಲವತ್ತು ಸಾವಿರ ರೂಪಾಯಿಗಳನ್ನು ಎಗರಿಸಿದ ಘಟನೆ ಮಂಗಳವಾರ ಸಂಜೆ ನವಲಗುಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ.
ನವಲಗುಂದ ತಾಲ್ಲೂಕಿನ ಪಡೆಸೂರ ಗ್ರಾಮದ ಯಲ್ಲಪ್ಪ ಸುಳ್ಳದ ಎಂಬುವರು ಖಾಸಗಿ ಬ್ಯಾಂಕ್‌ನಿಂದ 40 ಸಾವಿರ ರೂ. ಡ್ರಾ ಮಾಡಿಕೊಂಡು ಬಸ್ ನಿಲ್ದಾಣಕ್ಕೆ ಬಂಮದಿದ್ದರು. ಬಳಿಕ ಬಸ್ ಹತ್ತುವಾಗ ಕಳ್ಳ ಕಿಸೆ ಕತ್ತರಿಸಿ, ಹಣವನ್ನು ಎಗರಿಸಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪೊಲೀಸ್ ಕಾನ್‌ಸ್ಟೇಬಲ್ ಜಿ.ಬಿ ಮೇಟಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಘಟನೆ ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಖದೀಮರನ್ನು ಹೆಡೆ ಮುರಿ ಕಟ್ಟೋದೇ ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಇದಕ್ಕೆ ಕಾರಣ ನವಲಗುಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮೆರಾಗಳು ಇಲ್ಲದೇ ಇರೋದು.
Kshetra Samachara
28/06/2022 08:33 pm