ಧಾರವಾಡ: ಹಿಂದೂಯೇತರ ವ್ಯಾಪಾರಿಗಳ ಅಂಗಡಿ ತೆರವು ಮಾಡಿದ ಬೆನ್ನಲ್ಲೇ ವ್ಯಾಪಾರಿ ನಬಿಸಾಬ್ ಕಣ್ಣೀರಿನ ಗೋಳು ಹೆಚ್ಚಾಗಿದೆ. ಹೌದು ಧಾರವಾಡದ ನುಗ್ಗಿಕೇರಿ ಹನುಮಂತ ದೇವಾಲಯದ ಬಳಿ ಕಲ್ಲಂಗಡಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ನಬಿಸಾಬ್ ಕಿಲ್ಲೇದಾರ್ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ.
ನುಗ್ಗಿಕೇರಿಯಲ್ಲಿ ಕಲ್ಲಂಡಿ ಅಂಗಡಿ ತೆರವುಗೊಳಿಸಿದ್ದು ಅಲ್ಲದೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಣ್ಣು ಒಡೆದು ಹಾಕಿದ್ದು, ಈ ವ್ಯಾಪಾರಿಗೆ ತುಂಬಲಾರಾದ ನಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ವ್ಯಾಪಾರಿ ನಬಿಸಾಬ್ ದೂರು ಕೊಟ್ಟಿದ್ದು, ಧಾರವಾಡ ಗ್ರಾಮೀಣ ಠಾಣೆಯಲ್ಲಿ ಎಫ್.ಐ.ಆರ್. ಕೂಡ ದಾಖಲಾಗಿದೆ. ನನ್ನ ಬದುಕು ಬೀದಿಗೆ ಬಿದ್ದಿದೆ. ಆ ದೇವರ ಮೇಲೆನೆ ಈಗ ನಾನು ನಂಬಿಕೆ ಇಟ್ಟಿದ್ದೇನೆ ಎಂದು ವ್ಯಾಪಾರಿ ನಬಿಸಾಬ್ ಕಿಲ್ಲೇದಾರ್ ಗೋಳು ತೋಡಿಕೊಂಡಿದ್ದಾರೆ.
ನನ್ನ ಹೊಟ್ಟೆ ಮೇಲೆ ಹೊಡೆಯಬೇಡಿ, ಬದುಕಲು ಬಿಡಿ, ದೇವರನ್ನೇ ನಂಬಿ ನಾನು ವ್ಯಾಪಾರ ಮಾಡುವುದು. ಕಲ್ಲಂಗಡಿ ಹಣ್ಣು ಒಡೆದವರು ಯಾರು ಅಂತಾ ಗೊತ್ತಿಲ್ಲ. ಆ ಬಗ್ಗೆ ನಾನು ದೂರು ಕೊಟ್ಟಿಲ್ಲ. ಆದರೆ, ಕೆಲವರು ಬಂದು ಹಣ್ಣು ಒಡೆದು ಹಾಕಿದ್ದಾರೆ ಎಂದು ಮಾತ್ರ ದೂರುಕೊಟ್ಟಿದೇನೆ ಅಂತಲೇ ವ್ಯಾಪಾರಿ ನಬಿಸಾಬ್ ಹೇಳಿಕೊಂಡಿದ್ದಾರೆ.
Kshetra Samachara
10/04/2022 02:16 pm