ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಕಸದಿಂದ ರಸದತ್ತ ನವಲಗುಂದ ಪುರಸಭೆ ದಾಪುಗಲು

ಪಬ್ಲಿಕ್ ನೆಕ್ಸ್ಟ್ ವಿಶೇಷ

ನವಲಗುಂದ : ಕಸದಿಂದ ರಸ ಎಂಬ ಮಾತು ಈಗ ನವಲಗುಂದ ಪುರಸಭೆ ಕಾರ್ಯವೈಖರಿಗೆ ಸಾಕ್ಷಿಯಾಗಿದೆ. ಮುಖ್ಯಾಧಿಕಾರಿಗಳ ಅಭಿವೃದ್ಧಿ ಕಾರ್ಯ, ಪೌರ ಕಾರ್ಮಿಕರ ಶ್ರಮ ಹಾಗೂ ಪಟ್ಟಣದ ಜನತೆಯ ಸಹಕಾರದಿಂದ ನವಲಗುಂದ ಪುರಸಭೆಗೆ ಹೆಚ್ಚಿನ ಆದಾಯ ತರುತ್ತಿದೆ. ಅರೇ ಏನು ಹೇಳ್ತಿದ್ದಾರೆ ಅಂತಾ ಯೋಚಿಸತಿದ್ದೀರಾ ಈ ಬಗ್ಗೆ ಕಂಪ್ಲೀಟ್ ಡಿಟೈಲ್ಸ್ ನಾವು ನೀಡ್ತೀವಿ...

ದಿನಕ್ಕೆ ಒಂಬತ್ತು ಟನ್‌ಗಿಂತ ಹೆಚ್ಚಿನ ಕಸ ಸಂಗ್ರಹಣೆ ನವಲಗುಂದ ಪಟ್ಟಣದಲ್ಲಿ ಆಗುತ್ತಿದೆ. ಪುರಸಭೆ ಕಸವನ್ನು ತೋಟಗಾರಿಕೆಗಾಗಿ ವರ್ಮಿ ಕಾಂಪೋಸ್ಟ್ ಗೊಬ್ಬರವನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದೆ. ದಿನನಿತ್ಯ ನವಲಗುಂದ ಸಾರ್ವಜನಿಕರಿಂದ ಪಡೆಯಲಾದ ತ್ಯಾಜ್ಯ ಈಗ ಮರು ಬಳಕೆ ಆಗ್ತಾ ಇದೆ. ಇದರಿಂದ ಫಲವತ್ತಾದ ಗೊಬ್ಬರ ಸಿದ್ಧಪಡಿಸಲಾಗುತ್ತಿದೆ. ಇದನ್ನು ಮತ್ತೆ ರೈತರಿಗೆ ಮಾರಾಟ ಮಾಡಿ, ಹೆಚ್ಚಿನ ಆದಾಯವನ್ನು ಪುರಸಭೆಗೆ ತರಲಾಗುತ್ತಿದೆ. ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ವೀರಪ್ಪ ಹಸಬಿ ಅವರು ಏನು ಹೇಳ್ತಾರೆ ನೀವೇ ಕೇಳಿ.

ಇನ್ನು ಕೇಂದ್ರ ಸರ್ಕಾರ, ಸ್ವಚ್ಛ ಭಾರತ್ ಮಿಷನ್ ಹಾಗೂ 15ನೇ ಹಣಕಾಸಿನ ಅಡಿಯಲ್ಲಿ ಐದು ಎಕರೆ ಪ್ರದೇಶದಲ್ಲಿರುವ ಘನ ತ್ಯಾಜ್ಯ ನಿರ್ವಹಣೆ ಘಟಕದಲ್ಲಿ ಏನೆಲ್ಲಾ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ ಎಂಬುದು ತಿಳಿಸಿದ್ದಾರೆ ವೀರಪ್ಪ ಹಸಬಿ ಅವರು.

ಈಗಾಗಲೇ ನವಲಗುಂದದಲ್ಲಿ ಶೇಖರಿಸಲಾದ ಕೆಲಸಕ್ಕೆ ಬಾರದ ಇಪ್ಪತ್ತು ಟನ್ ಕಸವನ್ನು ಬಾಗಲಕೋಟೆಯ ಸಿಮೆಂಟ್ ಫ್ಯಾಕ್ಟರಿಗೆ ಕಳುಹಿಸಲಾಗುತ್ತಿದೆ. ಇಂತಹ ಅಭಿವೃದ್ಧಿ ಹಾಗೂ ಹೊಸ ಹೆಜ್ಜೆ ಇಡುತ್ತಿರುವ ಪುರಸಭೆ ಕಾರ್ಯಕ್ಕೆ ಮೆಚ್ಚಿಗೆ ಸಹ ವ್ಯಕ್ತವಾಗುತ್ತಿದೆ. ಇನ್ನು ನವಲಗುಂದ ಸಾರ್ವಜನಿಕರು ಹಸಿ ಕಸ ಹಾಗೂ ಒಣ ಕಸ ಬೇರ್ಪಡಿಸಿ ನೀಡುತ್ತಿರುವುದೇ ನಮ್ಮ ಈ ಕಾರ್ಯಕ್ಕೆ ಸಹಕಾರವಾಗಿದೆ ಎಂಬ ಮಾತು ಮುಖ್ಯಾಧಿಕಾರಿಗಳದ್ದಾಗಿದೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

09/05/2022 01:10 pm

Cinque Terre

103.3 K

Cinque Terre

1

ಸಂಬಂಧಿತ ಸುದ್ದಿ