ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಯಾಣಿಕರಲ್ಲಿ ವಿನಂತಿ: ಮೈಸೂರಿನಿಂದ ಅಜ್ಮೀರ್, ಹುಬ್ಬಳ್ಳಿ ರೈಲುಗಳ ಸಮಯ ಬದಲಾವಣೆ

ಮೈಸೂರು: ಮೈಸೂರಿನಿಂದ ಹುಬ್ಬಳ್ಳಿ ಹಾಗೂ ಮೈಸೂರಿನಿಂದ ಅಜ್ಮೀರ್‌ ತೆರಳುವ ರೈಲುಗಳ ಸಮಯವನ್ನು ಪರಿಷ್ಕರಣೆ ಮಾಡಲಾಗಿದೆ.

ಈ ಸಂಬಂಧ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕಿ ಪ್ರಿಯಾ ಶೆಟ್ಟಿ, ರೈಲು ಸಂಖ್ಯೆ 06581/06582 ಹುಬ್ಬಳ್ಳಿ- ಮೈಸೂರು- ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್‌ ರೈಲು ಡಿಸೆಂಬರ್‌ 23ರಿಂದ ಪರಿಷ್ಕೃತ ಸಮಯದಲ್ಲಿ ಹುಬ್ಬಳ್ಳಿ ಮತ್ತು ಮೈಸೂರಿನಿಂದ ಸಂಚಾರ ಆರಂಭಿಸಲಿದೆ. ರೈಲು ಸಂಖ್ಯೆ 06210/ 06209 ಮೈಸೂರು- ಅಜ್ಮೀರ್- ಮೈಸೂರು ಎಕ್ಸ್‌ಪ್ರೆಸ್‌ ವಿಶೇಷ ರೈಲು ಮಂಗಳವಾರದಿಂದ ಪರಿಷ್ಕೃತ ಸಮಯದಲ್ಲಿ ಸಂಚಾರ ಆರಂಭಿಸಿದೆ ಎಂದು ತಿಳಿಸಿದ್ದಾರೆ.

ರೈಲು ಸಂಖ್ಯೆ 06581 ಹುಬ್ಬಳ್ಳಿ - ಮೈಸೂರು ವಿಶೇಷ ಎಕ್ಸ್‌ಪ್ರೆಸ್‌ ಸಂಜೆ 6.20ಕ್ಕೆ ಹುಬ್ಬಳ್ಳಿಯಿಂದ ಹೊರಟು ಮರುದಿನ ಬೆಳಗ್ಗೆ 8.55ಕ್ಕೆ ಮೈಸೂರು ತಲುಪಲಿದೆ. ರೈಲು ಸಂಖ್ಯೆ 06582 ಮೈಸೂರು- ಹುಬ್ಬಳ್ಳಿ ಸ್ಪೆಷಲ್‌ ಎಕ್ಸ್‌ಪ್ರೆಸ್‌ ಸಂಜೆ 6.35ಕ್ಕೆ ಮೈಸೂರಿನಿಂದ ಹೊರಟು ಮರುದಿನ ಬೆಳಗ್ಗೆ 10.25ಕ್ಕೆ ಧಾರವಾಡ ತಲುಪಲಿದೆ.

ರೈಲು ಸಂಖ್ಯೆ 06210 ಮೈಸೂರು- ಅಜ್ಮೀರ್‌ ಸಾಪ್ತಾಹಿಕ ಎಕ್ಸ್‌ಪ್ರೆಸ್‌ ವಿಶೇಷ ರೈಲು ಮಂಗಳವಾರ ಸಂಜೆ 7ಕ್ಕೆ ಹೊರಟು ಎರಡನೇ ದಿನ ಮಧ್ಯಾಹ್ನ 3.10ಕ್ಕೆ ಅಜ್ಮೀರ್‌ ತಲುಪಲಿದೆ. ರೈಲು ಸಂಖ್ಯೆ 06209 ಅಜ್ಮೀರ್‌- ಮೈಸೂರು ಎಕ್ಸ್‌ಪ್ರೆಸ್‌ ವಿಶೇಷ ರೈಲು ಅಜ್ಮೀರ್‌ನಿಂದ ಬೆಳಗ್ಗೆ 6ಕ್ಕೆ ಹೊರಟು ಎರಡನೇ ದಿನ ಮಧ್ಯಾಹ್ನ 2.15ಕ್ಕೆ ಮೈಸೂರು ತಲುಪಲಿದೆ.

Edited By : Vijay Kumar
Kshetra Samachara

Kshetra Samachara

23/12/2020 04:59 pm

Cinque Terre

17.99 K

Cinque Terre

0

ಸಂಬಂಧಿತ ಸುದ್ದಿ