ವರದಿ: ಈರಣ್ಣ ವಾಲಿಕಾರ
ಹುಬ್ಬಳ್ಳಿ: ಹು-ಧಾ ಅವಳಿನಗರದಲ್ಲಿ ಕೋಟಿ ಕೋಟಿ ಖರ್ಚು ಮಾಡಿ, ತ್ವರಿತ ಬಸ್ ಸಂಚಾರಕ್ಕೆ ಅನುಕೂಲವಾಗಲೆಂದು
ಬಿಆರ್ಟಿಎಸ್ ನ್ನು ನಿರ್ಮಾಣ ಮಾಡಿದರು. ಆದರೆ ಸೌಲಭ್ಯ ಮಾತ್ರ ಜನರಿಗೆ ಅನುಕೂಲ ಆಗದಂತಿವೆ.
ಹೀಗೆ ಕೆಲವೊಂದು ಚಿಗರಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಅನುಕೂಲ ಆಗಲೆನ್ನುವ ದೃಷ್ಟಿಯಿಂದ, ಲಿಫ್ಟ್, ಮೇಲ್ಸೇತುವೆ, ಅಂಡರ್ ಪಾಸ್, ವ್ಯವಸ್ಥೆಯನ್ನು ಮಾಡಿದ್ದಾರೆ.
ಆದರೆ ಉಪಯೋಗ ಮಾತ್ರ ಶೂನ್ಯ. ಇದಕ್ಕಾಗಿಯೇ ಸಾವಿರಾರು ಕೋಟಿ ರೂ . ಖರ್ಚು ಮಾಡಿದ್ದು ವ್ಯರ್ಥವಾಗುತ್ತಿರುವುದಕ್ಕೆ ಮುಖ್ಯ ಕಾರಣ ಬಿಆರ್ಟಿಎಸ್ ಕಂಪನಿ ಅವುಗಳ ನಿರ್ವಹಣೆ ಸರಿಯಾಗಿ ಮಾಡದೇ ಇರುವುದು. ಸಮಂಜಸವಲ್ಲ....
ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಇಳಿದ ಕೂಡಲೇ, ಹಾಗೂ ಬಸ್ ನಿಲ್ದಾಣಕ್ಕೆ ಬರಲು ಅನುಕೂಲವಾಗಲಿ ಎಂದು ಹುಬ್ಬಳ್ಳಿಯ ಹೊಸೂರ ಪ್ರಾದೇಶಿಕ ಬಸ್ ನಿಲ್ದಾಣ , ಉಣಕಲ್ಲ ಕ್ರಾಸ್ , ಉಣಕಲ್ಲ ಕೆರೆ ಬಳಿ ಹಾಗೂ ನವನಗರ , ರಾಯಾಪುರ ಇಸ್ಕಾನ್ ದೇವಸ್ಥಾನ , ಎಸ್ ಡಿಎಂ ಆಸ್ಪತ್ರೆ ಬಳಿ ಎಫ್ಓಬಿ ನಿರ್ಮಿಸಿ ಲಿಫ್ಟ್ ವ್ಯವಸ್ಥೆ ಕೂಡ ಮಾಡಲಾಗಿದೆ .
ಆದರೆ , ಲಿಫ್ಟ್ ಆಪರೇಟರ್ ಅಲ್ಲಿ ಇರುವುದಿಲ್ಲ. ಲಿಫ್ಟ್ ಕೂಡ ಚಾಲ್ತಿಯಲ್ಲಿ ಇರುವುದಿಲ್ಲ. ಆ ಕಾರಣ ಜನರು ಕೈಯಲ್ಲಿ ಜೀವ ಇಟ್ಟುಕೊಂಡು, ರಸ್ತೆ ದಾಟಿ ಬಸ್ ನಿಲ್ದಾಣ ಮುಟ್ಟುವಂತಹ ಪರಿಸ್ಥಿತಿ ಎದುರಾಗಿದೆ.
ಇನ್ನು ನಡೆದು ಹೋಗಬೇಕಾದರೆ ಸುತ್ತು ಬಳಸಿ ಹೋಗಬೇಕಿದ್ದು , ಇದಕ್ಕೆ 5-10 ನಿಮಿಷ ಬೇಕಾಗುತ್ತದೆ . ವೃದ್ಧರು , ಮಹಿಳೆಯರು ನಡೆದು ಹೋಗುವುದು ತುಂಬಾ ಕಷ್ಟಕರ .
ಹೀಗಾಗಿ ಬಹುತೇಕ ಪ್ರಯಾಣಿಕರು ಎಫ್ಓಬಿ ಬದಲಾಗಿ ಪರ್ಯಾಯ ಮಾರ್ಗ ಹುಡುಕಿಕೊಂಡು ಬಸ್ ನಿಲ್ದಾಣ ತಲುಪುತ್ತಿದ್ದಾರೆ. ಆದಷ್ಟು ಬೇಗ ಆಡಳಿತ ಮಂಡಳಿ ಈ ಸಮಸ್ಯೆಗೆ ಮುಕ್ತಿ ಕೊಟ್ಟು, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಾಗಿದೆ......!
Kshetra Samachara
23/12/2020 07:14 am