ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ:ಪಬ್ಲಿಕ್ ನೆಕ್ಸ್ಟ್ ವರಿದಿಯಿಂದ ಶಿವಗಂಗಾ ಲೇಔಟ್ ಸುಮಾರು ದಿನಗಳ ಸಮಸ್ಯೆಗೆ ಸಿಕ್ಕಿತು ಮುಕ್ತಿ

ಹುಬ್ಬಳ್ಳಿ: ಅಂತೂ ಇಂತೂ ಐದಾರು ವರ್ಷದ ಸಾರ್ವಜನಿಕ ಸಮಸ್ಯೆಗೆ ಪಬ್ಲಿಕ್ ನೆಕ್ಸ್ಟ್ ವರದಿಯಿಂದ ಮುಕ್ತಿ ಸಿಕ್ಕಿದೆ.ಸಾಕಷ್ಟು ಸಮಸ್ಯೆಗಳಿಂದ ಬೇಸತ್ತಿದ್ದ ಜನರಿಗೆ ಪಬ್ಲಿಕ್ ನೆಕ್ಸ್ಟ್ ನಿರಾಳತೆ ತಂದುಕೊಟ್ಟಿದೆ.

ಹುಬ್ಬಳ್ಳಿ ಕೇಶ್ವಾಪೂರದ ಕುಸುಗಲ್ ರಸ್ತೆಯಲ್ಲಿರುವ ಶಿವಗಂಗಾ ಲೇಔಟ್ ಹತ್ತಿರದಲ್ಲಿ ಸುಮಾರು ವರ್ಷಗಳಿಂದ ವಾಟರ್ ಲಿಕೇಜ್ ಸಮಸ್ಯೆ ತಲೆದೂರಿತ್ತು.ಈ ಕುರಿತು ನಿಮ್ಮ ಪಬ್ಲಿಕ್ ನೆಕ್ಸ್ಟ್ ಸಾಕಷ್ಟು ಬಾರಿ ವರದಿಯನ್ನು ಮಾಡಿ ಅಧಿಕಾರಿಗಳ ಗಮನಕ್ಕೆ ತೆಗೆದುಕೊಂಡು ಬಂದು ಸಮಸ್ಯೆಗೆ ಪರಿಹಾರ ಕಲ್ಪಿಸಿದೆ.ಇನ್ನೂ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿಗೆ ಎಚ್ಚೇತ್ತುಕೊಂಡ ಅಧಿಕಾರಿಗಳು ಸಮಸ್ಯೆಗೆ ಸ್ಪಂಧಿಸಿ ಕಾರ್ಯವನ್ನು ಕೈಗೆತ್ತಿಕೊಂಡು ಸಾರ್ವಜನಿಕರು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.

ಒಟ್ಟಿನಲ್ಲಿ ಸುಮಾರು ದಿನಗಳ ಸಮಸ್ಯೆಯಿಂದ ಬೇಸತ್ತಿದ್ದ ಜನರಿಗೆ ಈಗ ನಿಟ್ಟುಸಿರು ಬಿಡುವಂತಾಗಿದ್ದು, ಸಾರ್ವಜನಿಕರು ಪಬ್ಲಿಕ್ ನೆಕ್ಸ್ಟ್ ಗೆ ಅಭಿನಂದನೆ ಸಲ್ಲಿಸಿದ್ದಾರೆ.

Edited By :
Kshetra Samachara

Kshetra Samachara

12/12/2020 08:52 pm

Cinque Terre

55.19 K

Cinque Terre

0

ಸಂಬಂಧಿತ ಸುದ್ದಿ