ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅವಳಿನಗರದ ಜನತೆಗೆ ಗುಡ್ ನ್ಯೂಸ್: ನೂರು ಕೋಟಿ ಮೊತ್ತದಲ್ಲಿ ನಿರ್ಮಾಣವಾಗಲಿದೆ ರಸ್ತೆ ಹಾಗೂ ಚರಂಡಿ

ಹುಬ್ಬಳ್ಳಿ: ಅಂತೂ ಇಂತೂ ಹು-ಧಾ ಅವಳಿನಗರದ ಜನರು ಕನಸು ನನಸಾಗಲಿದೆ.ಬಹುದಿನಗಳ ಸಮಸ್ಯೆಗೆ ಪರಿಹಾರ ಸಿಗುವುದು ನಿಶ್ಚಿತವಾಗಿದ್ದು,ಸಾರ್ವಜನಿಕರ ಸಮಸ್ಯೆಗೆ ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡು ಈಗ ವಿನೂತನ ನಿರ್ಧಾರಕ್ಕೆ ಮುಂದಾಗಿದೆ.ಅಷ್ಟಕ್ಕೂ ಸಾರ್ವಜನಿಕ ಸಮಸ್ಯೆ ಆದ್ರೂ ಏನು...?ಮಹಾನಗರ ಪಾಲಿಕೆ ನಿರ್ಧಾರ ಏನು ಅಂತೀರಾ ಈ ಸ್ಟೋರಿ ನೋಡಿ....

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವಪೂರ್ಣ ಯೋಜನೆಯಲ್ಲಿ ಒಂದಾಗಿರುವ ಸ್ಮಾರ್ಟ್ ಸಿಟಿ ಕಾಮಗಾರಿ ಬಹುತೇಕ ಮುಗಿಯತ್ತ ಬಂದರೂ ಕೂಡ ರಸ್ತೆ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ.ಎಲ್ಲೆಂದರಲ್ಲಿ ಗುಂಡಿ ಬಿದ್ದಿರುವ ರಸ್ತೆಗಳು,ಸಂಚಾರಕ್ಕೆ ಭಯ ಹುಟ್ಟಿಸುವ ಭಯಂಕರ ರಸ್ತೆಗಳಿಂದ ಜನ ಜೀವನವೇ ಸಮಸ್ಯೆ ಸುಳಿಯಲ್ಲಿ ಸಿಲುಕಿಕೊಂಡಿದ್ದವು ಈ ಹಿನ್ನೆಲೆಯಲ್ಲಿ ಹು-ಧಾ ಮಹಾನಗರ ಪಾಲಿಕೆ ಸ್ಮಾರ್ಟ್ ಸಿಟಿ, ಸಿಆರ್ ಎಫ್ ಅನುದಾನ ಹೊರತು ಪಡಿಸಿ ನೂರು ಕೋಟಿ ಮೊತ್ತದಲ್ಲಿ ಅವಳಿನಗರದ ಚರಂಡಿ ಹಾಗೂ ರಸ್ತೆ ಕಾಮಗಾರಿಗೆ ಮಹಾನಗರ ಪಾಲಿಕೆ ಮುಂದಾಗಿದೆ.

ಹೌದು..ಹು-ಧಾ ಮಹಾನಗರದ ಪ್ರಮುಖ ರಸ್ತೆಗಳನ್ನು ಹಾಗೂ ಚರಂಡಿಗಳನ್ನು ನಿರ್ಮಾಣ ಮಾಡುವ ಮೂಲಕ ಅವಳಿನಗರದ ಜನರ ಸಮಸ್ಯೆಗೆ ಸ್ಪಂದಿಸಲು ಮುಂದಾಗಿದ್ದು, ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಲ್ಲಿ ಸುಮಾರು 100 ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಕ್ಕೆ ಮಹಾನಗರ ಪಾಲಿಕೆ ಚಿಂತನೆ ನಡೆಸಿದ್ದು,ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.ಅಲ್ಲದೇ 38 ಕೋಟಿ ಪ್ರಸ್ತಾವನೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು,ಮುಂಬರುವ ದಿನಗಳಲ್ಲಿ ನೂರು ಕೋಟಿ ಪ್ರಸ್ತಾವನೆಗೆ ಸರ್ಕಾರ ಸಹಿ ಹಾಕಲಿದೆ ಎಂಬುವುದು ಹು-ಧಾ ಮಹಾನಗರ ಜನತೆ ಸಮಸ್ಯೆಗೆ ಇತಿ ಶ್ರೀ ಹಾಡಿದಂತಾಗುವುದು ಖಂಡಿತ.

ಈಗಾಗಲೇ ಹು-ಧಾ ಅವಳಿನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆದಿದ್ದು, ಸ್ಮಾರ್ಟ್ ಸಿಟಿಯಲ್ಲಿ ಬರದಿರುವ ಪ್ರಮುಖ ರಸ್ತೆಗಳನ್ನು ಹಾಗೂ ನಗರ ಪ್ರದೇಶದ ಚರಂಡಿ ಅಭಿವೃದ್ಧಿ ಕುರಿತು ಮಹಾನಗರ ಪಾಲಿಕೆ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು,ಕೂಡಲೇ ಪಾಲಿಕೆ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ ಕಾರ್ಯಾರಂಭ ಮಾಡಬೇಕಿದೆ.

Edited By : Nagesh Gaonkar
Kshetra Samachara

Kshetra Samachara

07/12/2020 07:01 pm

Cinque Terre

55 K

Cinque Terre

30

ಸಂಬಂಧಿತ ಸುದ್ದಿ