ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ರಸ್ತೆ,ಫುಟ್ಪಾತ್ ಮೇಲೆ ಹೊರಟ್ರೆ ಕಸವೋ ಕಸ! ಎಲ್ಲೆಂದರಲ್ಲಿ ಬೆಳೆಯುತ್ತಿರುವ ಕಸ! ಆದಷ್ಟು ಬೇಗ ಸ್ವಚ್ಛ ನಗರವಾಗುತ್ತಾ?

ವರದಿ: ಪ್ರಶಾಂತ ಲೋಕಾಪುರ

ಧಾರವಾಡ : ನೋಡೋಕ್ಕೆ ಸ್ವಚ್ಛ, ಸುಂದರ ಹಾಗೂ ಸ್ಮಾರ್ಟ್ ಸಿಟಿ ಕನಸು! ಕಂಡ ಕಂಡಲ್ಲಿ ಕಸದ ರಾಶಿ,ಫುಟ್ಪಾತ್ ಮೇಲೆ ಬೆಳೆಯುತ್ತಿರುವ ಕಸ,ಎಲ್ಲೆಂದರಲ್ಲಿ ಸರಾಯಿ ಬಾಟಲಿಗಳು,ಸಿಗರೇಟ್ ಪ್ಯಾಕೆಟಗಳದ್ದೆ ಹಾವಳಿ,ನಡೆದಾಡುವ ರಸ್ತೆಯಲ್ಲಿ ಕಲ್ಲು ಒಡೆದ್ರು,ಕಸದ ರಾಶಿ ಬೆಳೆದ್ರು ನೋಡದ ಅಧಿಕಾರಿಗಳು

ಹೀಗೆ ನೋಡುವ ದೃಶ್ಯಗಳು ಕಾಣುವುದು ನಮ್ಮ ಧಾರವಾಡದ ಕರ್ನಾಟಕ ಕಾಲೇಜಿಗೆ ಹೋಗುವ ಪುಟ್ ಬಾತ್ ಸೇರಿ ಅವಳಿ ನಗರ ಕಸದ ರಾಶಿಯಿಂದ ಅವ್ಯವಸ್ಥೆಯ ಆಗರವಾಗಿದೆ.

ನಗರದ ತುಂಬೆಲ್ಲ ಕಸದ ರಾಶಿ,ಎಲ್ಲೆಂದರಲ್ಲಿ ಬಿಸಾಡಿದ ಕಸ,ನಗರದ ತುಂಬೆಲ್ಲ ಬೆಳೆಯುತ್ತಿರುವ ಕಸ ಯಾಕೇ ಹೀಂಗಾಯಿತ್ತು,ಇದಕ್ಕೊಂದೇ ಕಾರಣ ಕೊರೊನಾ ಕೊರೊನಾ,ಇದನ್ನ ತಡೆಗಟ್ಟಲು ಲಾಕ್ ಡೌನ್ ಮಾಡಿದ್ದೂ ಆಯ್ತು,

ವಿಸ್ತರಣೆ ಮಾಡಿ ತೆರವುಗೊಳಿಸಿದ್ದು ಆಯ್ತು, 2020 ವರ್ಷ ಮುಕ್ತಾಯ ಹಂತಕ್ಕೂ ಬಂತು.ಆದ್ರೆ ನಮ್ಮ ಧಾರವಾಡದಲ್ಲಿ ಪುಟ್ಬ್ ಬಾತ್ ಗಳು,ರಸ್ತೆಗಳ ಮೇಲೆ ಕಸದ ರಾಶಿ ಕಂಡು ಬಂದ್ರೂ ಅಧಿಕಾರಿಗಳು ಇತ್ತ ಗಮನ ಹರಿಸದೆ ಇರುವುದು ವಿಪರ್ಯಾಸವೆ ಸರಿ,

ಇನ್ನೊಂದೆಡೆ ನಗರದ ತುಂಬೇಲ್ಲ ಕುಡುಕರು ಕುಡಿದ ಬಾಟಲಿಗಳನ್ನು ರಸ್ತೆ ಹಾಗೂ ಉದ್ಯಾನವನದೆಲ್ಲೆಡೆ ಬಿಸಾಕುತ್ತಿದ್ದು,ಇದರಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ.ನಗರದ ಕೆಸಿಡಿ ಉದ್ಯಾನವನದ ಪಕ್ಕದಲ್ಲಿರುವ ಪುಟ ಬಾತ್ ಮೇಲೆ ಬಾಟಲಿಗಳನ್ನು ಎಸೆದಿರೋದ್ರಿಂದ,ನಡೆದುಕೊಂಡು ಹೋಗುವ ಜನರಿಗೂ ತೊಂದರೆಯಾಗುತ್ತಿದ್ದು ಎಲ್ಲಿ ನೋಡಿದ್ರು,ಬಿಯರ್ ಬಾಟಲಿ, ಸಿಗರೇಟ್ ಪ್ಯಾಕೆಟ್ ಗಳನ್ನು ಎಲ್ಲೆಂದರಲ್ಲಿ ಬಿಸಾಕಿರುವುದರಿಂದ ನಗರದಲ್ಲಿ ಅವ್ಯವಸ್ಥೆಯ ಆಗರವಾಗಿ ನಿರ್ಮಾಣವಾಗಿದೆ.

ಸ್ವಚ್ಛ, ಸುಂದರ ಹಾಗೂ ಸ್ಮಾರ್ಟ್ ಸಿಟಿ ಕನಸು ಕಾಣುತ್ತಿರುವ ಅಧಿಕಾರಿಗಳು ನಗರದಲ್ಲಿ ಕಸ ಬೆಳೆಯುತ್ತಿದ್ದರು ಮರೆತಂತೆ ಕಾಣುತ್ತಿದೆ. ಪರಿಣಾಮ ನಗರದ ನಾನಾ ಕಡೆ ರಸ್ತೆಯುದ್ದಕ್ಕೂ ಕಸದ ರಾಶಿ ರಾರಾಜಿಸುತ್ತಿದೆ.

ಮುಂದಿನ ದಿನಗಳಲ್ಲಿ ಪಾಲಿಕೆ ಅಧಿಕಾರಿಗಳ ನಗರದ ತುಂಬೆಲ್ಲ ಬೆಳೆಯುತ್ತಿರುವ ಕಸದ ರಾಶಿ,ಹಾಗೂ ಕರ್ನಾಟಕ ಕಾಲೇಜಿನ ಪಾರ್ಕ್ ಸೇರಿ ಹಾಗೂ ಪುಟ್ ಬಾತ್ ನಲ್ಲಿರುವ ಮದ್ಯದ ಬಾಟಲಿಗಳನ್ನು ಸ್ವಚಗೊಳಿಸಿ ಪುಂಡಪೊಕರಿಗಳಿಗೆ ಕಡಿವಾಣ ಹಾಕುತ್ತಾರಾ ಕಾದು ನೋಡಬೇಕಿದೆ.

Edited By : Manjunath H D
Kshetra Samachara

Kshetra Samachara

07/12/2020 01:34 pm

Cinque Terre

33.42 K

Cinque Terre

4

ಸಂಬಂಧಿತ ಸುದ್ದಿ