ಅಣ್ಣಿಗೇರಿ : ರಾಜ್ಯದಲ್ಲಿ ಮರಾಠಾ ಪ್ರಾಧಿಕಾರ ಸ್ಥಾಪನೆ ಮಾಡುವ ವಿಚಾರ ಕುರಿತು ರಾಜ್ಯದಲ್ಲಿ ಡಿ.5ರಂದು ವಿವಿಧ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಬಂದ್ ಹಿನ್ನಲೆಯಲ್ಲಿ ನೀರಸ ಪ್ರಕ್ರಿಯೆ ಕಂಡು ಬಂದಿತು.
ಪಟ್ಟಣದಲ್ಲಿರುವ ಎಲ್ಲ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಛೇರಿಗಳು ಎಂದಿನಂತೆ ತಮ್ಮ ಕಾರ್ಯಾರಂಭವನ್ನು ಮಾಡಿವೆ. ಪಟ್ಟಣದ ರೈತ ಹೋರಾಟ ಸಮಿತಿ.
ಸಮತಾ ಸೈನಿಕ ದಳ ಹಾಗೂ ಜಯಕರ್ನಾಟಕ ಹೋರಾಟ ಸಮಿತಿ ನೇತೃತ್ವದಲ್ಲಿ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಕೆಲ ಕಾಲ ಪ್ರತಿಭಟನೆ ಮಾಡುವ ಮೂಲಕ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನಾ ಸ್ಥಳಕ್ಕೆ ತಹಶಿಲ್ದಾರ ಕೋಟ್ರೇಶ್ವರ ಗಾಳಿ ಆಗಮಿಸಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಪ್ರತಿಭಟನೆ ಸ್ಥಗಿತಗೊಳಿಸಿದ ಘಟನೆ ನಡೆಯಿತು.
Kshetra Samachara
05/12/2020 04:13 pm