ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕೊನೆಗೂ ಆರಂಭವಾದ ಇನಾಂಹೊಂಗಲ ಸೇತುವೆ

ಧಾರವಾಡ: ಕಳೆದ ವರ್ಷದ ಪ್ರವಾಹದಿಂದಾಗಿ ಕೊಚ್ಚಿಕೊಂಡು ಹೋಗಿದ್ದ ಸವದತ್ತಿ ರಸ್ತೆಯಲ್ಲಿನ ಇನಾಂಹೊಂಗಲ ಸೇತುವೆ ಮರು ನಿರ್ಮಾಣ ಕಾಮಗಾರಿ ಕೊನೆಗೂ ಪೂರ್ಣಗೊಂಡು ಸಂಚಾರಕ್ಕೆ ಲಭ್ಯವಾಗಿದೆ.

ಕಳೆದ ವರ್ಷದ ಮಳೆಯಿಂದ ತುಪ್ಪರಿ ಹಳ್ಳದ ಪ್ರವಾಹಕ್ಕೆ ಸೇತುವೆ ಕೊಚ್ಚಿಕೊಂಡು ಹೋಗಿತ್ತು. ಒಂದು ವರ್ಷದಿಂದ ಈ ಸೇತುವೆ ಮರು ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿತ್ತು. ಸೇತುವೆ ಪಕ್ಕವೇ ತಾತ್ಕಾಲಿಕ ರಸ್ತೆ ಕೂಡ ನಿರ್ಮಾಣ ಮಾಡಲಾಗಿತ್ತು. ಆದರೆ, ಪ್ರಸಕ್ತ ವರ್ಷವೂ ವಿಪರೀತ ಮಳೆಯಾಗಿದ್ದರಿಂದ ಆ ತಾತ್ಕಾಲಿಕ ರಸ್ತೆಯೂ ಹಲವು ಸಲ ಜಲಾವೃತಗೊಂಡು ಸಂಚಾರ ಬಂದ್ ಆಗಿತ್ತು.

ಇದೀಗ ಸೇತುವೆ ಮರು ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಆರಂಭ ಕೂಡ ಆಗಿರುವುದು ವಾಹನ ಸವಾರರಿಗೆ ಸಂತಸ ತಂದಿದೆ.

Edited By :
Kshetra Samachara

Kshetra Samachara

03/12/2020 05:38 pm

Cinque Terre

25.21 K

Cinque Terre

0

ಸಂಬಂಧಿತ ಸುದ್ದಿ