ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ವಿದ್ಯುತ್ ಕಂಬದ ಪಕ್ಕ ಸುಳಿದ್ರೇ ಕರೆಂಟ್ ಶಾಕ್ : ಸಾರ್ವಜನಿಕರೇ ಹುಷಾರ್

ಕುಂದಗೋಳ : ಗ್ರಾಮದ ಬೀದಿ ಬೆಳಗಬೇಕಾದ ವಿದ್ಯುತ್ ಕಂಬವೊಂದು ಅದೇ ಗ್ರಾಮದ ಜನರ ಪ್ರಾಣಕ್ಕೆ ಹೊಂಚು ಹಾಕಿ ಕೂತಂತಹ ವಾತಾವರಣ ಕಡಪಟ್ಟಿ ಗ್ರಾಮದಲ್ಲಿ ನಿರ್ಮಾಣವಾಗಿದೆ.

ಹೌದು ! ಕಡಪಟ್ಟಿ ಗ್ರಾಮದ ಕಮತರ ಓಣಿಯಲ್ಲಿನ ವಿದ್ಯುತ್ ಕಂಬವೊಂದರಲ್ಲಿ ಸತತ ಆರು ತಿಂಗಳಿಂದ ಸಂಪೂರ್ಣ ವಿದ್ಯುತ್ ಹರಿದಾಡುತ್ತಿದ್ದು, ಈಗಾಗಲೇ ಈ ವಿದ್ಯುತ್ ಹರಿಯುವಿಕೆಗೆ ಸಿಕ್ಕು ನಾಯಿ ಹಾಗೂ ಮಂಗವೊಂದು ಪ್ರಾಣ ಬಿಟ್ಟಿವೆ. ಈ ಬಗ್ಗೆ ಯಾವ ಪಂಚಾಯ್ತಿ ಅಧಿಕಾರಿಗಳಾಗಲಿ ಹೆಸ್ಕಾಂ ಸಿಬ್ಬಂದಿಗಳಾಗಲಿ ಕ್ರಮ ಕೈಗೊಂಡಿಲ್ಲ.

ಚಿಕ್ಕ ಮಕ್ಕಳು ವೃದ್ಧರು ಇದೇ ಮುಖ್ಯರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದು, ಅರಿಯದೆ ಯಾರಾದ್ರೂ ಕಂಬದ ಪಕ್ಕ ಸುಳಿದ್ರೆ ಕರೆಂಟ್ ಶಾಕ್ ಗ್ಯಾರಂಟಿ. ವಿದ್ಯುತ್ ಕಂಬ ಬಿಟ್ಟು ಮೊಳ ದೂರ ಹಾಯ್ದರು ಜನರಿಗೆ ಅಪಾಯದ ಭೀತಿ ದೂರವಾಗಿಲ್ಲ.

ಈ ಬಗ್ಗೆ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಿ ಹಳೆಯದಾದ ಈ ಕಬ್ಬಿನದ ಕಂಬ ಬದಲಾಗಿ ಸಿಮೇಂಟ್ ಕಂಬ ಅಳವಡಿಸಿ ಎನ್ನುತ್ತಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

03/12/2020 12:17 pm

Cinque Terre

45.97 K

Cinque Terre

10

ಸಂಬಂಧಿತ ಸುದ್ದಿ