ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಬಾಡಿಗೆ ಪಡೆದ್ರೂ ಶೌಚಾಲಯ ನೈರ್ಮಲ್ಯ ಕಾಪಾಡದ ತಾಲೂಕು ಪಂಚಾಯತಿ

ಕುಂದಗೋಳ : ಈ ವಿವಿಧ ಇಲಾಖೆಗಳ ಸರ್ಕಾರಿ ಸಂಕೀರ್ಣ ಕಟ್ಟಡಲ್ಲಿನ ಪ್ರತಿ ಇಲಾಖೆಗಳು ಶೌಚಾಲಯದ ನಿರ್ವಹಣಾ ವೆಚ್ಚ ಸೇರಿ ತಾಲೂಕು ಪಂಚಾಯಿತಿಗೆ ಬಾಡಿಗೆ ಪಾವತಿಸಿದ್ರೂ, ಈ ಶೌಚಾಲಯಗಳ ಅವ್ಯವಸ್ಥೆಗೆ ಜನ ಹಿಡಿಶಾಪ ಹಾಕುವಂತಿದೆ.

ಹೌದು ! ಈ ವಿವಿಧ ಇಲಾಖೆಗಳ ಸರ್ಕಾರಿ ಸಂಕೀರ್ಣ ಕಟ್ಟಡದ ಶೌಚಾಲಯ ನಿರ್ವಹಣೆ ಜವಾಬ್ದಾರಿ ತಾಲೂಕು ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದ್ದರೂ, ಈ ಬಗ್ಗೆ ತಾಲೂಕು ಪಂಚಾಯಿತಿ ಅಧಿಕಾರಿಗಳು ಎಂದು ತುಟಿ ಪಿಟಿಕ್ ಎಂದಿಲ್ಲಾ ನಿರ್ವಹಣೆ ಮಾಡಿಸುವ ಗೋಜಿಗೂ ಹೋಗಿಲ್ಲಾ.

ಈ ಪರಿಣಾಮ ಶೌಚಾಲಯಗಳು ಧೂಳು ಮೆತ್ತಿ ನಿರ್ವಹಣೆ ಕೊರತೆಯಿಂದ ಜಾಡು ಕಟ್ಟಿ ಹಾಳಾಗಿ ಹೋಗಿವೆ. ಇನ್ನು ಶೌಚಗೃಹದ ಅನೈರ್ಮಲ್ಯ ಗಬ್ಬು ವಾಸನೆ ನಿತ್ಯ ಅಧಿಕಾರಿ ಹಾಗೂ ಜನರಿಗೂ ಮಾರಕವಾಗಿದೆ. ಈ ಶೌಚಾಲಯದ ಒಳಗೆ ಗುಟ್ಕಾ, ಸಿಗರೇಟ್ ಚೀಟಗಳು ಬಿದ್ದಿದ್ದು ಪುಡಾರಿಗಳು ಕಟ್ಟಡಕ್ಕೆ ಲಗ್ಗೆ ಇಟ್ರಾ ? ಎಂಬ ಅನುಮಾನ ಶುರುವಾಗಿದೆ.

ಈ ಬಗ್ಗೆ ವಿವಿಧ ಇಲಾಖೆಗಳ ಸರ್ಕಾರಿ ಸಂಕೀರ್ಣ ಕಟ್ಟಡಲ್ಲಿನ ಇಲಾಖಾ ಅಧಿಕಾರಿಗಳು ನಾವು ಬಾಡಿಗೆ ಪಾವತಿಸುತ್ತಿವೆ. ತಾಲೂಕು ಪಂಚಾಯ್ತಿ ವಾರಕ್ಕೊಮ್ಮೆ ಸಿಬ್ಬಂದಿಗಳಿಂದ ಶೌಚಾಲಯ ನಿರ್ವಹಣೆ ಮಾಡ್ಬೇಕು ಅಂತಾರೇ.

ಈ ಕಟ್ಟಡದಲ್ಲಿ ಒಟ್ಟು 5 ಮುಖ್ಯ ಇಲಾಖೆಗಳಿವೆ. ರೊಕ್ಕಾ ಪಡೆದು ಸುಮ್ನೇ ಕೂರದೆ ಇನ್ನಾದ್ರೂ ತಾಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿಗಳು ಈ ಬಗ್ಗೆ ಗಮನಿಸಲಿ ಅನ್ನೋದೆ ಪಬ್ಲಿಕ್ ನೆಕ್ಸ್ಟ್ ಆಶಯ.

Edited By : Nagesh Gaonkar
Kshetra Samachara

Kshetra Samachara

28/11/2020 07:09 pm

Cinque Terre

91.08 K

Cinque Terre

1

ಸಂಬಂಧಿತ ಸುದ್ದಿ