ಹುಬ್ಬಳ್ಳಿ: ಹು-ಧಾ ಅವಳಿನಗರದ ಸ್ಮಾರ್ಟ್ ಸಿಟಿ ಕಾಮಗಾರಿ ಪೂರ್ಣಗೊಳ್ಳುತ್ತಾ ಬಂದರೂ ಕೂಡ ಅಂದುಕೊಂಡ ಮಟ್ಟಿಗೆ ಮಾತ್ರ ಯಾವುದೇ ರೀತಿಯ ಲಾಭವಾಗಿಲ್ಲ.ಬಹು ನಿರೀಕ್ಷಿತ ಯೋಜನೆಯಿಂದ ಹು-ಧಾ ಮಹಾನಗರ ಸಂಕಷ್ಟಕ್ಕೆ ಮಾತ್ರ ಯಾವುದೇ ಅಂತ್ಯ ಸಿಕ್ಕಿಲ್ಲ.ಅಷ್ಟಕ್ಕೂ ಯಾವುದು ಆ ಯೋಜನೆ ಅಂತೀರಾ ಈ ಸ್ಟೋರಿ ನೋಡಿ..
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವಪೂರ್ಣ ಯೋಜನೆಯಲ್ಲಿ ಒಂದಾಗಿರುವ ಸ್ಮಾರ್ಟ್ ಸಿಟಿ ಕಾಮಗಾರಿ ಬಹುತೇಕ ಮುಗಿಯತ್ತ ಬಂದರೂ ಕೂಡ ರಸ್ತೆ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ.ಎಲ್ಲೆಂದರಲ್ಲಿ ಗುಂಡಿ ಬಿದ್ದಿರುವ ರಸ್ತೆಗಳು,ಸಂಚಾರಕ್ಕೆ ಭಯ ಹುಟ್ಟಿಸುವ ಭಯಂಕರ ರಸ್ತೆಗಳಿಂದ ಜನ ಜೀವನವೇ ಸಮಸ್ಯೆ ಸುಳಿಯಲ್ಲಿ ಸಿಲುಕಿಕೊಂಡಿದೆ.ರಾಜ್ಯ ಹಾಗೂ ಕೇಂದ್ರ ಸರ್ಕಾರ ಮಾತ್ರ ಸಾರ್ವಜನಿಕರ ಸೌಕರ್ಯಗಳ ಕುರಿತು ಕಿಂಚಿತ್ತೂ ಚಕಾರವನ್ನು ಕೂಡ ಎತ್ತುತ್ತಿಲ್ಲ.ಪ್ರವಾಹದ ಹೆಸರಿನಲ್ಲಿ ಸರ್ಕಾರಗಳು ರಸ್ತೆ ನಿರ್ಮಾಣಕ್ಕೆ ಸಬೂಬ ನೀಡುತ್ತಿವೆ.ಇನ್ನೂ ಹು-ಧಾ ಮಹಾನಗರದ ರಸ್ತೆಗಳ ಕುರಿತು ಜನಪ್ರತಿನಿಧಿಗಳು ಬೇಸರ ವ್ಯಕ್ತಪಡಿಸಿದ್ದು,ಶಾಸಕ ಅರವಿಂದ ಬೆಲ್ಲದ ಕೂಡ ರಸ್ತೆಯ ಬಗ್ಗೆ ಬೇಸರಗೊಂಡಿದ್ದಾರೆ.
ಹು-ಧಾ ಮಹಾನಗರದ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು,ಸಂಚರಿಸಲು ಕೂಡ ಭಯ ಸೃಷ್ಟಿಸುತ್ತಿವೆ.ಅಲ್ಲದೇ ಕಳೆದ ವರ್ಷ ನವೆಂಬರ್ ತಿಂಗಳವರೆಗೆ ಮಳೆಯಿದ್ದರಿಂದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು,ಇನ್ನೂ ಎರಡು ಮೂರು ತಿಂಗಳಲ್ಲಿ ಸರಿಯಾಗುತ್ತವೇ ಎನ್ನುತ್ತಾರೆ.ಆದರೇ ಎಷ್ಟೇ ವರ್ಷಗಳು ಕಳೆದರೂ ಕೂಡ ಹು-ಧಾ ಅವಳಿನಗರದ ರಸ್ತೆಗಳು ಮಾತ್ರ ಉತ್ತಮ ರೀತಿಗೆ ಮರಳುವುದು ಗಗನಕುಸುಮವಾಗಿದೆ.
ಒಟ್ಟಿನಲ್ಲಿ ಜನಪ್ರತಿನಿಧಿಗಳು ಮಾತ್ರ ಒಂದು ತಿಂಗಳು ಎರಡು ತಿಂಗಳ ಅಂತ ಭರವಸೆ ಕೊಡುತ್ತಲೇ ಬರುತ್ತಿದ್ದಾರೆ.ಆದರೆ ಯಾವಾಗ ಈ ಸಮಸ್ಯೆಗೆ ಸಂಪೂರ್ಣ ಪರಿಹಾರ ಸಿಗುತ್ತದೆಯೋ ಕಾಯ್ದು ನೋಡಬೇಕಿದೆ.ಸರ್ಕಾರ ಪೊಳ್ಳು ಭರವಸೆ ಕೈ ಬಿಟ್ಟು ಸಾರ್ವಜನಿಕರ ಸಮಸ್ಯೆಗೆ ಮುಂದಾಗಬೇಕಿದೆ.
Kshetra Samachara
27/11/2020 06:23 pm