ನವಲಗುಂದ : ಬಾಗಿದ ಚರಂಡಿಯ ಕಟ್ಟೆ, ರಸ್ತೆಯೂದ್ದಕ್ಕೂ ಬರೀ ಗುಂಡಿಗಳು ಇದರಿಂದ ಬೇಸತ್ತ ಸ್ಥಳೀಯರು ಇಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನೇ ಸ್ಥಳಕ್ಕೆ ಕರೆಸಿ ತಮ್ಮ ಸಮಸ್ಯೆಯನ್ನು ತೋರ್ಪಡಿಸಿದ್ದಾರೆ.
ಎಸ್ ಈ ರಸ್ತೆ ನವಲಗುಂದದಿಂದ ಅಣ್ಣಿಗೇರಿಗೆ ಹೋಗುತ್ತೆ, ಆದರೆ ಈಗ ಈ ರಸ್ತೆಯಲ್ಲಿ ಸಂಚಾರಿಸೋದು ಅಪಾಯಕ್ಕೆ ಅಹ್ವಾನ ನೀಡುವಂತ್ತಾದ್ದಾಗಿದೆ.
ರಸ್ತೆಯೂದ್ದಕ್ಕೂ ಎಲ್ಲಿ ಬೇಕಾದಲ್ಲಿ ಬರೀ ತಗ್ಗು ಗುಂಡಿಗಳು ಇರೋದ್ರಿಂದ ಅದೆಷ್ಟೋ ವಾಹನ ಸವಾರರು ಅಪಘಾತಕ್ಕಿಡಾಗಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
ಇನ್ನೂ ಇದೆ ರಸ್ತೆ ಪಕ್ಕದಲ್ಲಿರುವ ಚರಂಡಿಯನ್ನು ನೋಡಿದ್ರೆ ಚರಂಡಿಯ ಒಂದು ಭಾಗ ಸಂಪೂರ್ಣ ಬಾಗಿದೆ ಅದು ಯಾವಾಗ ಬಿಳ್ಳುತ್ತೋ ಗೊತ್ತಿಲ್ಲಾ, ಇದರಿಂದಾಗಿ ಸ್ಥಳೀಯರು ಆತಂಕಕ್ಕಿಡಾಗಿದ್ದಾರೆ.
ಇದರಿಂದ ಕಂಗಾಲಾದ ಜನ ಬುಧವಾರ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನೇ ಕರೆದುಕೊಂಡು ಬಂದು ತಮ್ಮ ಸಮಸ್ಯೆಯನ್ನು ತೋರಿಸಿದ್ದಾರೆ.
ನಂತರ ಸ್ಥಳೀಯರು ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿ ತಮ್ಮ ಅಳಲನ್ನು ತೋಡಿಕೊಂಡರು...
ನಂತರ ಈ ಸಂಬಂಧ ಮಾತನಾಡಿದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಾದ ಎಸ್ ಎನ್ ಸಿದ್ದಾಪುರ, ಈ ರಸ್ತೆಯಲ್ಲಿ ದೊಡ್ಡ ಪ್ರಮಾಣದ ವಾಹನಗಳು ಸಂಚಾರಿಸೋದ್ರಿಂದ ಚರಂಡಿ ಬಾಗಿದೆ ಇದನ್ನು ಮಾರ್ಚ್ ತಿಂಗಳು ಮುಗಿಯೋದರೊಳಗೆ ಈ ಸಮಸ್ಯೆ ಬಗೆಹರಿಸುತ್ತೇವೆ ಎಂದಿದ್ದಾರೆ.
ಏನೇ ಇರಲಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಬೇಕು, ಇಲ್ಲಿನ ಸ್ಥಳೀಯರು ಮತ್ತು ವಾಹನ ಸವಾರರು ನಿರ್ಭಯವಾಗಿ ತಿರುಗಾಡುವಂತಾಗಬೇಕು ಎಂಬುದೆ ನಮ್ಮ ಆಶಯ...
ತಂದ ಸ್ಥಳೀಯರು
Kshetra Samachara
11/11/2020 09:31 pm