ಹುಬ್ಬಳ್ಳಿ- ಹು-ಧಾ ಮಹಾನಗರದಲ್ಲಿ ಸ್ವಚ್ಚತಾ ಹಿತದೃಷ್ಟಿಯಿಂದ ನಿರ್ಮಾಣಗೊಂಡಿರುವ ಇ-ಟಾಯ್ಲೆಟನಲ್ಲಿ ಅವ್ಯವಸ್ಥೆ ಗೋಚರಿಸುತ್ತಿದೆ. ಒಂದು ಅಥವಾ ಎರಡು ರೂ. ಕ್ವಾಯಿನ್ ಎಷ್ಟು ಸಾರಿ ಹಾಕಿದರು ಸಹ, ಟಾಯ್ಲೆಟ್ ಡೋರ್ ಒಪನ್ ಆಗದೇ ಇರುವುದರಿಂದ ಸಾರ್ವಜನಿಕರು ಕಂಗಲಾಗಿದ್ದಾರೆ......
ಸ್ಮಾರ್ಟ್ ಸಿಟಿ ಆಯೋಜನೆ ಅಡಿಯಲ್ಲಿ, ಅಳವಡಿಸಿರುವ ಇ-ಶೌಚಾಲಯಗಳು ಬಳಕೆ ಆಗಿದ್ದು ಕಡಿಮೆ. ನಗರದ ಚಿಟಗುಪ್ಪಿ ಆಸ್ಪತ್ರೆಗೆ ಬರುವ ರೋಗಿಗಳ ಅನುಕೂಲಕ್ಕಾಗಿ ನಿರ್ಮಾಣ ಮಾಡಿದ ಈ ಟಾಯ್ಲೆಟ್ ಗಳು. ನಾಣ್ಯಗಳನ್ನು ಹಾಕಿ ಹಾಕಿದ್ರು ಸಹ, ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದಾಗಿ ಇಲ್ಲಿ ಬರುವ ರೋಗಿಗಳು ಹಾಗೂ ಸಂಬಂಧಿಕರು ಟಾಯ್ಲೆಟ್ ಸಮಸ್ಯೆ ಎದುರಿಸುತ್ತಿರುವ ಪ್ರಸಂಗ ಬಂದಿದೆ. ಅಷ್ಟೇ ಅಲ್ಲದೇ ಸ್ವಚ್ಛತೆ ಕೂಡ ಕಣ್ಮರೆಯಾಗಿದ್ದು, ಸಾರ್ವಜನಿಕರಿಗೆ ಕೆಲವು ಕಡೆ ಮೂಗು ಮುಚ್ಚಿಕೊಂಡೆ, ಇ- ಶೌಚಾಲಯ ಬಳಕೆ ಮಾಡುವ ಅನಿವಾರ್ಯತೆ ಎದುರಾಗಿದೆ...
ಸಾರ್ಟ್ ಸಿಟಿ ಯೋಜನೆಯಡಿ ಮಹಾನಗರದ ವಿವಿಧ ಕಡೆ ನಿರ್ಮಾಣ ಮಾಡಿದ ಇ- ಟಾಯ್ಲೆಟ್ ಅಸ್ವಸ್ಥತೆಯಿಂದ ಕೂಡಿರುವ ಹಿನ್ನೆಲೆಯಲ್ಲಿ. ಸಾರ್ವಜನಿಕರು ಇ-ಟಾಯ್ಲೆಟ್ ಬಳಕೆಗೆ ನಿರಾಸಕ್ತಿ ತೊರುವಂತಾಗಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ನೈರ್ಮಲ್ಯ ಕಾಯ್ದುಕೊಳ್ಳಬೇಕಾಗಿದ್ದ ಅಧಿಕಾರಿಗಳ ನಿರ್ಲಕ್ಷ್ಯ ಕಾಣುತ್ತಿದೆ. ಬಹುತೇಕ ಇ-ಶೌಚಾಲಯಗಳು ಗಬ್ಬು ನಾರುತ್ತಿರುವುದರಿಂದ ಸಾರ್ವಜನಿಕರು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು......
Kshetra Samachara
10/11/2020 08:39 am