ಅಣ್ಣಿಗೇರಿ : ಸರ್ಕಾರ ಹಣ ಖರ್ಚು ಮಾಡಿ ಕಟ್ಟಡ ನಿರ್ಮಿಸಿ ಅವುಗಳ ನಿರ್ವಹಣೆ ಮಾತ್ರವಲ್ಲ ಅವುಗಳ ಉಪಯೋಗವನ್ನು ಸಹ ಮರೆತು ಬಿಟ್ಟಿದೆ.
ಈ ಪಾಲಿಗೆ ಅಣ್ಣಿಗೇರಿ ಪಟ್ಟಣದ ಜಿಲ್ಲಾ ಸಾಕ್ಷರದೀಪ ಸಮಿತಿಯ ಮುಂದುವರಿಕೆ ಶಿಕ್ಷಣ ಕೇಂದ್ರವೊಂದು ಪಾಳು ಬಿದ್ದು ಹಾಳಾಗಿ ಹೋಗಿದೆ.
ಅಣ್ಣಿಗೇರಿ ಪಟ್ಟಣದ ಹೊಸ ಪ್ಲಾಟ್ ನಲ್ಲಿ ಸ್ವರ್ಣ ಜಯಂತಿ ಶಹರಿ ರೋಜಗಾರ್ ಯೋಜನೆಯಡಿ ನಿರ್ಮಿಸಿದ ಸಮುದಾಯ ಭವನ ಹಾಗೂ ಆ ಕಟ್ಟಡದ ಮೇಲಿನ ಮುಂದುವರಿಕೆ ಶಿಕ್ಷಣ ಕೇಂದ್ರ ಎರೆಡು ಪಾಳು ಬಿದ್ದಿದ್ದು ಸುತ್ತಲೂ ನಿರ್ವಹಣೆ ಕೊರತೆಯಿಂದ ಕಸ ಬೆಳೆದು ಕಟ್ಟಡ ಶೀಥಲಾವ್ಯವಸ್ಥೆಗೆ ತಲುಪಿದೆ.
ಇಷ್ಟಾದ್ರು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಸೂಕ್ತ ಕ್ರಮ ಕೈಗೊಂಡಿಲ್ಲ, ಇನ್ನು ಈ ಕಟ್ಟಡ ಗಮನಿಸಿದರೇ ಇಲ್ಲಿನ ಮುಂದುವರಿಕೆ ಶಿಕ್ಷಣ ಕೇಂದ್ರ ಸಮುದಾಯ ಭವನ ಉಪಯೋಗಕ್ಕಿಲ್ಲವಾಗಿದ್ದು ಸರ್ಕಾರದ ಹಣ ವ್ಯರ್ಥವಾದಂತಿದೆ.
Kshetra Samachara
09/11/2020 07:31 pm