ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್ : ಶ್ರೀಧರ ಪೂಜಾರ
ಕುಂದಗೋಳ : ಪಟ್ಟಣದ ಕಿಲ್ಲಾ ಓಣಿಯಲ್ಲಿ ಚರಂಡಿ ನೀರು ರಸ್ತೆಯ ಮೇಲೆಯೇ ಹರಿಯುತ್ತಿರುವ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ 'ರಸ್ತೆ ಹೋಗಿ ಚರಂಡಿ ಯಾಯ್ತು ರೋಗ ಕಾಲಿಗೆ ಮೆತ್ತಿ ಮನೆಗೆ ಬಂತು' ಎಂಬ ಶಿರ್ಷಿಕೆ ಅಡಿಯಲ್ಲಿ ವರದಿಯೊಂದನ್ನಾ ಪ್ರಕಟಿಸಿತ್ತು.
ಸದ್ಯ ನಮ್ಮ ವರದಿಯಿಂದ ಎಚ್ಚೇತ್ತುಕೊಂಡ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ನೂತನ ಪಟ್ಟಣ ಪಂಚಾಯಿತಿ ಅಧ್ಯಕ್ಷ ವಾಗೀಶ ಗಂಗಾಯಿ ಇಂದು ಕಿಲ್ಲಾ ಓಣಿಗೆ ಭೇಟಿ ನೀಡಿ ಹುದುಗಿ ಹೋದ ಚರಂಡಿ ಹೂಳು ತೆಗಿಸಿ ರಸ್ತೆ ಮೇಲೆ ಹರಿಯುವ ನೀರಿಗೆ ತಾತ್ಕಾಲಿಕ ಚರಂಡಿ ವ್ಯವಸ್ಥೆ ಮಾಡಿದ್ದಾರೆ.
ಜೊತೆಗೆ ಕಿಲ್ಲಾ ಓಣಿಯ ಪೂರ್ಣ ಚರಂಡಿ ವ್ಯವಸ್ಥೆಯನ್ನು ಜೆಸಿಬಿ ಯಂತ್ರದ ಮೂಲಕ ಸರಿಪಡಿಸಿ ಕಾಂಕ್ರೀಟ್ ಚರಂಡಿ ನಿರ್ಮಾಣದ ಯೋಚನೆಗೆ ಪ್ರಸ್ತಾವನೆ ಸೂಚಿಸಿದ್ದಾರೆ ಈ ಬಗ್ಗೆ ಅಲ್ಲಿನ ಜನ ಎನ್ ಹೇಳ್ತಾರೆ ನೀವೆ ಕೇಳಿ.
ಕೇಳಿದ್ರಲ್ಲಾ ಒಟ್ಟಾರೆ ಪಬ್ಲಿಕ್ ನೆಕ್ಸ್ಟ್ ಸುದ್ಧಿ ಪ್ರಸಾರದ ನಂತರದಲ್ಲಿ ಜನರಿಗೆ ನಿತ್ಯ ಸಂಚಾರಕ್ಕೆ ತೊಡಕಾದ ಕೆಸರು ನೀರಿಗೆ ಮುಕ್ತಿ ಸಿಕ್ಕತ್ತಾಗಿದೆ.
Kshetra Samachara
07/11/2020 04:05 pm