ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸಿಸಿ ಕ್ಯಾಮೆರಾ ವರ್ಕ ಮಾಡ್ತಾ ಇಲ್ಲಾ ನೋಡ್ರಣ್ಣಾ

ಧಾರವಾಡ: ನಗರದ ಪ್ರಮುಖ ವೃತ್ತ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಇಲಾಖೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿರುತ್ತದೆ. ಕಳ್ಳ ಕಾಕರು ಹಾಗೂ ಅಪಘಾತವಾದಾಗ ವಾಹನಗಳನ್ನು ಪತ್ತೆ ಮಾಡುವ ಸಲುವಾಗಿ ಈ ರೀತಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿರುತ್ತದೆ. ಆದರೆ, ಆ ಸಿಸಿ ಕ್ಯಾಮೆರಾಗಳೇ ಬಂದ್ ಆದರೆ ಅವು ಇದ್ದೂ ಇಲ್ಲದಂತಾಗುತ್ತದೆ. ಇದಕ್ಕೆ ಉತ್ತಮ ನಿದರ್ಶನ ಎಂಬಂತೆ ಧಾರವಾಡದ ಪ್ರಮುಖ ವೃತ್ತ ಹಾಗೂ ಏರಿಯಾಗಳಲ್ಲಿನ ಸಿಸಿ ಕ್ಯಾಮೆರಾಗಳೇ ಕೆಲಸ ಮಾಡದಿರುವುದು.

ಹೌದು! ಧಾರವಾಡದ ಪ್ರಮುಖ ವೃತ್ತವಾದ ಜ್ಯುಬಿಲಿ ವೃತ್ತದಲ್ಲಿ ಹಾಕಲಾಗಿರುವ ಸಿಸಿ ಕ್ಯಾಮೆರಾಗಳು ತಮ್ಮ ಕೆಲಸ ನಿಲ್ಲಿಸಿ ಸುಮಾರು ದಿನಗಳೇ ಕಳೆದಿವೆ. ಅಪಘಾತ ಹಾಗೂ ಕಳ್ಳರ ಪತ್ತೆಗಾಗಿ ಈ ಕ್ಯಾಮೆರಾಗಳು ಸಾಕಷ್ಟು ಸಹಾಯಕವಾದರೂ ಅವುಗಳ ದುರಸ್ತಿಗೆ ಮಾತ್ರ ಪೊಲೀಸ್ ಇಲಾಖೆ ಮುಂದಾಗಿಲ್ಲ.

ಇತ್ತೀಚೆಗೆ ನಗರದಾದ್ಯಂತ ಬೈಕು ಹಾಗೂ ಕಾರು ಕಳ್ಳತನವಾಗುತ್ತಿದ್ದು, ಆ ಕಳ್ಳರ ಪತ್ತೆಗಾಗಿ ಈ ಸಿಸಿ ಕ್ಯಾಮೆರಾಗಳು ಬಹಳ ಉಪಯುಕ್ತವಾಗುತ್ತವೆ ಎಂಬ ಮಾಹಿತಿ ಅರಿತಿದ್ದರೂ ಪೊಲೀಸ್ ಇಲಾಖೆ ಏಕೆ ಇಷ್ಟೊಂದು ನಿಷ್ಕಾಳಜಿ ಮಾಡುತ್ತಿದೆಯೋ ಗೊತ್ತಿಲ್ಲ.

ಬಿಆರ್ ಟಿಎಸ್ ರಸ್ತೆಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳನ್ನು ಹೊರತುಪಡಿಸಿದರೆ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಾಕಿರುವ ಹಾಗೂ ಪೊಲೀಸ್ ಇಲಾಖೆ ಅಳವಡಿಸಿರುವ ಬಹುತೇಕ ಕ್ಯಾಮೆರಾಗಳು ಕೆಲಸ ಮಾಡದೇ ಇರುವುದರಿಂದ ಇದು ಕಳ್ಳರಿಗೆ ಮತ್ತೊಂದು ರೀತಿಯಲ್ಲಿ ಪ್ಲಸ್ ಪಾಯಿಂಟ್ ಆದಂತಾಗಿದೆ. ಕೂಡಲೇ ಮಹಾನಗರ ಪಾಲಿಕೆಯಾಗಲಿ ಹಾಗೂ ಪೊಲೀಸ್ ಇಲಾಖೆಯಾಗಲಿ ಎಚ್ಚೆತ್ತುಕೊಂಡು ಕ್ಯಾಮೆರಾಗಳನ್ನು ದುರಸ್ತಿಗೊಳಿಸಿ ಕಳ್ಳರಿಗೆ ಹಾಗೂ ದರೋಡೆಕೋರರಿಗೆ ಬಿಸಿ ಮುಟ್ಟಿಸಬೇಕು ಎಂಬುದೇ ಪಬ್ಲಿಕ್ ನೆಕ್ಸ್ಟ್ ಕಳಕಳಿ.

Edited By : Nagesh Gaonkar
Kshetra Samachara

Kshetra Samachara

05/11/2020 10:40 am

Cinque Terre

28.72 K

Cinque Terre

1

ಸಂಬಂಧಿತ ಸುದ್ದಿ