ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅತಿವೃಷ್ಟಿ ಅವಾಂತರ: ಬೆಳೆ ಹಾನಿಗೆ ಒತ್ತಾಯಿಸಿದ ರಾಯಣ್ಣ ಅಭಿಮಾನಿಗಳು

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಾದ್ಯಂತ ಅತಿ ಹೆಚ್ಚು ಅತಿವೃಷ್ಟಿಯಾಗಿ, ಬೆಣ್ಣೆ ಹಳ್ಳ ಹಾಗೂ ಇನ್ನಿತರೆ ಹಳ್ಳಗಳು ವ್ಯಾಪ್ತಿ ಮೀರಿ ಹರಿಯುತ್ತಿವೆ. ಇದರಿಂದ ಜೀವ ಹಾನಿ ಹಾಗೂ ಅಪಾರ ಆಸ್ತಿಪಾಸ್ತಿ, ಬೆಳೆ ನಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ, ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಅಭಿಮಾನಿ ಬಳಗದ ಸಂಸ್ಥಾಪಕ ಅಧ್ಯಕ್ಷರಾದ ಸುರೇಶ್ ಗೋಕಾಕ್ ಅವರು ಮಾತನಾಡಿ, ಬೆಣ್ಣೆ ಹಳ್ಳ 2006ರಿಂದ 2022ವರೆಗೂ ಈ 10ರಿಂದ 15 ವರ್ಷಗಳಲ್ಲಿ ಅತಿವೃಷ್ಟಿ ಅದಾಗೆಲ್ಲ ಬೆಣ್ಣೆ ಹಳ್ಳ ತನ್ನ ವ್ಯಾಪ್ತಿ ಮೀರಿ, ಅಕ್ಕ ಪಕ್ಕದ ರೈತರ ಬೆಳೆಗಳಿಗೆ ಹಾಗೂ ಗ್ರಾಮಗಳಿಗೆ ಹಾನಿಯನ್ನುಂಟು ಮಾಡುತ್ತಾ ಬಂದಿದೆ ಅದಕ್ಕಾಗಿ ಜಿಲ್ಲಾಡಳಿತ ಕೂಡಲೆ ಹಾನಿಗೊಳಗಾದ ರೈತರಿಗೆ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು.

ಒಂದು ವೇಳೆ ಬೆಣ್ಣೆ ಹಳ್ಳ ಹಾಗೂ ಇನ್ನಿತರ ಹಳ್ಳಗಳನ್ನು ಶೀಘ್ರವಾಗಿ ಒತ್ತೂವರಿ ತೆರವು ಹಾಗೂ ಹೂಳೆತ್ತಿ ಅಗಲೀಕರಣ ಮಾಡದಿದ್ದರೆ, ಮುಂದಿನ ದಿನಗಳಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಉಗ್ರವಾದ ಪ್ರತಿಭಟನೆ ಮಾಡಲಾಗುತ್ತದೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಅಭಿಮಾನಿ ಬಳಗದ ಅಭಿಮಾನಿ ಬಳಗದ ಸದಸ್ಯರಾದ ಪ್ರವೀಣ್ ಗೋಕಾವಿ, ಸಚಿನ್ ಗಾಣಿಗೇರ್, ವಿನಾಯಕ್ ಗುಡ್ಡದ್ಕೇರಿ, ಸೋಹನ್ ಮುಶಣ್ಣನವರ್, ವಿನಯ ಹುಲಿಹಳ್ಳಿ, ಸುರೇಶ್ ಎಲಿಗಾರ್, ರಾಮಚಂದ್ರ ದಳವಿ, ಚಿದಾನಂದ, ಧ್ರುವಚಂದ್ರ, ಅಭಿ ಹಾಗೂ ಇನ್ನೂ ಅನೇಕ ಅಭಿಮಾನಿಗಳಾದ ಸದಸ್ಯರು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

12/09/2022 04:57 pm

Cinque Terre

19.42 K

Cinque Terre

1

ಸಂಬಂಧಿತ ಸುದ್ದಿ