ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ:ತುಪ್ಪರಿಹಳ್ಳ ಯೋಜನೆಯ ವೈಜ್ಞಾನಿಕ ಸರ್ವೇ ನಡೆಸಿ ಬಜೆಟ್‌ನಲ್ಲಿ ಅನುದಾನ ಮೀಸಲಿಡಿ: ಕೊರವರ

ಧಾರವಾಡ: ತುಪ್ಪರಿಹಳ್ಳ ಧಾರವಾಡ ಜಿಲ್ಲೆಯ ಜೀವನಾಡಿ. ಈ ಯೋಜನೆಯ ಕುರಿತು ಈವರೆಗೆ ಕೇವಲ ದೊಡ್ಡ ದೊಡ್ಡ ಭಾಷಣಗಳಾಗಿವೆಯೇ ಹೊರತು ವೈಜ್ಞಾನಿಕ ಸರ್ವೇ ನಡೆಸದಿರುವುದು ತುಂಬಾ ವಿಷಾದನೀಯ ಸಂಗತಿ ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಪ್ಪರಿ ಹಳ್ಳ ಉಳಿಸಿಕೊಂಡು ಮುಂದಿನ ಪಿಳಿಗೆಗೆ ಅದನ್ನು ಸದುಪಯೋಗವಾಗುವ ರೀತಿಯಲ್ಲಿ ತೆಗೆದುಕೊಂಡು ಹೋಗುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಧಾರವಾಡ ತಾಲೂಕಿನ ಮೇಲ್ಗಡೆಯಿಂದ ಬಂದು ನವಲಗುಂದ ತಾಲೂಕಿನ ಕೆಳಗಡೆವರೆಗೆ ಯೋಜನೆಯನ್ನು ಅನುಷ್ಠಾನಗೊಳಿಸಿದ್ದಲ್ಲಿ ಸುಮಾರು 12.24 TMC ನೀರನ್ನು ತಡೆಗಟ್ಟಿ ಪ್ರವಾಹದಿಂದ ಆಗುವ ಅನಾಹುತಗಳಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.

ಸುಮಾರು 56 ಉಪಹಳ್ಳಗಳ ಪೈಕಿ 40 ಉಪಹಳ್ಳಗಳು ಧಾರವಾಡ ತಾಲೂಕಿನಲ್ಲಿ ತುಪ್ಪರಿಹಳ್ಳಕ್ಕೆ ಸೇರುತ್ತಿದ್ದು ಅವುಗಳನ್ನೂ ಕೂಡ ಅಭಿವೃದ್ದಿ ಪಡಿಸಬಹುದಾಗಿದೆ. MI ಅಧಿಕಾರಿಗಳಿಂದ ಸರ್ವೇ ಇಲಾಖೆಗೆ ಪತ್ರ ಬರೆದು ಸರ್ವೇ ಮಾಡಿ ವರದಿ ಸಲ್ಲಿಸಲು ಕೇಳಿಕೊಂಡಿರುತ್ತಾರೆ. ಆದರೆ ಸರ್ವೇ ಇಲಾಖೆಯವರು ನಮ್ಮಲ್ಲಿ ಸಿಬ್ಬಂದಿ ಹಾಗೂ ಅನುದಾನದ ಕೊರತೆ ಇರುವುದಾಗಿ ಹಾಗೂ ಅನುದಾನವನ್ನು ನೀಡಿದಲ್ಲಿ ಹೊರಗುತ್ತಿಗೆ ಸಿಬ್ಬಂದಿಯಿಂದ ಸರ್ವೇ ಮಾಡಿಸಿ ವರದಿ ಸಲ್ಲಿಸುವದಾಗಿ ತಿಳಿಸಿದ್ದಾರೆ.

ಹೀಗಾಗಿ ರಾಜ್ಯ ಸರ್ಕಾರಕ್ಕೆ ಈ ಮೂಲಕ ಮನವಿ ಮಾಡಿಕೊಳ್ಳುವುದೇನೆಂದರೆ ಧಾರವಾಡದಲ್ಲಿ ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯ, ಪಕ್ಕದ ಜಿಲ್ಲೆಯಾದ ಗದಗನಲ್ಲಿ ಗ್ರಾಮೀಣಾಭಿವೃದ್ದಿ ವಿಶ್ವವಿದ್ಯಾಲಯ ಹಾಗೂ ರಾಷ್ಟ್ರದ ಪ್ರತಿಷ್ಠಿತ IIT ಹಾಗೂ IIIT ಗಳಿದ್ದು ಅವುಗಳ ಸದುಪಯೋಗ ಪಡೆದುಕೊಂಡು ವೈಜ್ಞಾನಿಕವಾಗಿ ಸರ್ವೆ ಕಾರ್ಯವನ್ನು ಕೈಕೊಂಡು ಪ್ರಸಕ್ತ ಬಜೆಟ್‌ಲ್ಲಿ ಇದಕ್ಕಾಗಿ ಪ್ರತ್ಯೇಕ ಅನುದಾನ ಮೀಸಲಿಡಬೇಕು ಎಂದು ಕೊರವರ ಆಗ್ರಹಿಸಿದರು.

Edited By : Manjunath H D
Kshetra Samachara

Kshetra Samachara

21/02/2022 08:46 pm

Cinque Terre

28.16 K

Cinque Terre

0

ಸಂಬಂಧಿತ ಸುದ್ದಿ