ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಲಾಕ್ ಡೌನ್ ತಗ್ಗಿಸಿದ ಅಪಘಾತ ಪ್ರಮಾಣ: ವಾಹನ ಸವಾರರೇ ಎಚ್ಚರದಿಂದ ಸಂಚರಿಸಿ

ಹುಬ್ಬಳ್ಳಿ: ವಾಹನ ಸವಾರರೇ ಎಚ್ಚರ...! ಲಾಕ್ ಡೌನ್ ವೇಳೆಯಲ್ಲಿ ರಸ್ತೆ ಅಪಘಾತದ ಸಂಖ್ಯೆ ತೀರಾ ಕಡಿಮೆ‌ ಪ್ರಮಾಣ ತಲುಪಿತ್ತು.ಅಲ್ಲದೇ ಅನ್ ಲಾಕ್ ಬಳಿಕ ಮತ್ತೆ ಅಪಘಾತದ ಪ್ರಮಾಣ ಏರಿಕೆಯಾಗುತ್ತಿದ್ದು,ಸಂಚಾರಿ ನಿಯಮ ಪಾಲಿಸಿ ಜೀವನ ಉಳಿಸಿಕೊಳ್ಳಿ.ಸಣ್ಣ ಅಜಾಗರೂಕತೆಯೂ ಭಾರಿ ತೊಂದರೆ ಕೊಡಬಹುದು...

ಹೌದು...ಕೊರೋನಾ ವೈರಸ್ ಎಲ್ಲ ವಲಯದಲ್ಲಿಯೂ ತನ್ನ ಕರಿಛಾಯೆಯಿಂದ ಸಂಕಷ್ಟಕ್ಕೆ ಸಿಲುಕಿಸಿತ್ತು.ಆದರೇ ಅಪಘಾತ ಪ್ರಮಾಣವನ್ನು ಕೆಳಮಟ್ಟಕ್ಕೆ ಕೊಂಡೊಯ್ಯುವ ಮೂಲಕ ಬಹುತೇಕ ರಸ್ತೆ ಅಪಘಾತಗಳಿಗೆ ಕಡಿವಾಣ ಹಾಕಿತ್ತು.ಆದರೇ ಅನ್ ಲಾಕ್ ಬಳಿಕ ಮತ್ತೆ ವಾಹನಗಳು ರಸ್ತೆಗೆ ಇಳಿಯುವ ಪ್ರಮಾಣ ಹೆಚ್ಚಾಗಿದ್ದು,ಮತ್ತೆ ಅಪಘಾತಗಳು ವೃದ್ಧಿಸುವ ಆತಂಕ ಎದುರಾಗತೊಡಗಿದೆ.

ಲಾಕ್ ಡೌನ್ ಪೂರ್ವದಲ್ಲಿ ಬಹುತೇಕ ದ್ವಿಚಕ್ರ ವಾಹನಗಳ ಅಪಘಾತ ಸರಣಿಯೋಪಾದಿಯಲ್ಲಿ ನಡೆಯುತ್ತಿದ್ದವೂ.ಅಲ್ಲದೇ ಎಲ್ಲೆಂದರಲ್ಲಿ ಬೈಕ್ ಹಾಗೂ ಕಾರ್ ಸೇರಿದಂತೆ ಬಾರಿ ಗಾತ್ರದ ವಾಹನಗಳು ಕೂಡ ಅಪಘಾತದಲ್ಲಿ ತುತ್ತಾಗುತ್ತಿದ್ದವು.ಆದರೇ ಲಾಕ್ ಡೌನ್ ಹೇರಿಕೆಯಿಂದ ಬಹುತೇಕ ಪ್ರತಿಶತ 80% ರಷ್ಟು ರಸ್ತೆ ಅಪಘಾತಗಳು ಕಡಿಮೆಯಾಗಿದ್ದವು.ಅನ್ ಲಾಕ್ ಆಗಿದ್ದೆ ತಡ ಮತ್ತೆ ರಸ್ತೆಗೆ ಇಳಿದ ವಾಹನಗಳಿಂದ ಅಪಘಾತ ಪ್ರಮಾಣ ವೃದ್ಧಿಸುತ್ತಿದೆ.

ಒಟ್ಟಿನಲ್ಲಿ ಕೊರೊನಾ ಲಾಕ್ ಡೌನ್ ಅಪಘಾತ ಪ್ರಮಾಣ ತಗ್ಗಿಸುವಲ್ಲಿ ಸಹಾಯಕವಾಗಿದ್ದು, ಸಾರ್ವಜನಿಕರು ಜಾಗರೂಕತೆಯಿಂದ ಸಂಚರಿಸಿ‌ ಜೀವನ ರಕ್ಷಣೆ ಮಾಡಿಕೊಳ್ಳಬೇಕಿದೆ.

Edited By : Nagesh Gaonkar
Kshetra Samachara

Kshetra Samachara

19/09/2020 04:31 pm

Cinque Terre

41.21 K

Cinque Terre

1

ಸಂಬಂಧಿತ ಸುದ್ದಿ