ಹುಬ್ಬಳ್ಳಿ:ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಲಾಗುತ್ತದೆ ಎನ್ನುತ್ತಲೇ ಸರ್ಕಾರ ಕೆಐಎಡಿಬಿಯ ಭೂಮಿಯ ದರವನ್ನು ಎಕರೆಗೆ 35 ಲಕ್ಷದ ವರೆಗೆ ಹೆಚ್ಚಿಸಿ ಎಂಎಸ್ ಎಮ್ ಇ ಉದ್ಯಮಿದಾರರನ್ನು ಸಂಕಷ್ಟಕ್ಕೆ ತಂದೊಡ್ಡಿದೆ.
ಈ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷ ಉದ್ಯಮಿದಾರರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಕಳೆದ ಒಂದು ವಾರದಿಂದ ಕೈಗಾರಿಕಾ ಪ್ರದೇಶಗಳಿಗೆ ಪಕ್ಷದ ವಿವಿಧ ತಂಡಗಳು ಭೇಟಿ ಮಾಡಿ ಪರಿಶೀಲನೆ ಕಾರ್ಯ ನಡೆಸುತ್ತಿದೆ.
ಸಣ್ಣ ಮತ್ತು ಮಧ್ಯಮ ಉದ್ಯಮಗಳು ಮೊದಲೇ ಕೊರೋನಾ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟ, ಬ್ಯಾಂಕ್ ಸಾಲ, ಸರ್ಕಾರದ ಹೆಚ್ಚಿನ ತೆರಿಗೆ ಸೇರಿದಂತೆ ಹಲವಾರು ಸಮಸ್ಯೆಗಳಿಂದ ತೀವ್ರವಾದ ಒತ್ತಡಕ್ಕೆ ಒಳಗಾಗಿವೆ.
ಈ ಸಮಯದಲ್ಲಿ ಸರ್ಕಾರ ಕೆಐಎಡಿಬಿ ಭೂಮಿಯ ದರವನ್ನು ಹೆಚ್ಚಿಸುವ ಮೂಲಕ ಗಾಯದ ಮೇಲೆ ಬರೆ ಹಾಕಿದೆ. ಈ ಹಿನ್ನೆಲೆಯಲ್ಲಿ ಎಎಪಿ ತಾರಿಹಾಳ, ಗಾಮನಗಟ್ಟಿ, ಗೋಕುಲ್, ರಾಯಾಪುರ ಸೇರಿದಂತೆ ಇನ್ನಿತರ ಕೈಗಾರಿಕಾ ಪ್ರದೇಶಗಳಿಗೆ ಭೇಟಿ ಮಾಡಿ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಉದ್ಯಮಿದಾರರ ಜೊತೆಗೆ ಮಾತನಾಡಿ ಸಮಸ್ಯೆ ಬಗ್ಗೆ ಚರ್ಚೆ ನಡೆಸಿತು.
Kshetra Samachara
28/10/2020 02:30 pm