ಧಾರವಾಡ: ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿ ಜೋರಾಗಿ ಹಬ್ಬುತ್ತಿದ್ದು, ಸಂಶಯಾಸ್ಪದ ರೀತಿಯಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಮಕ್ಕಳ ಕಳ್ಳ ಎಂದು ಭಾವಿಸಿ ಗ್ರಾಮಸ್ಥರೇ ಕಂಬಕ್ಕೆ ಕಟ್ಟಿ ಥಳಿಸಿರುವ ಘಟನೆ ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ನಡೆದಿದೆ.
ಹಿಂದಿಯಲ್ಲಿ ಮಾತನಾಡುತ್ತಿದ್ದ ಈ ವ್ಯಕ್ತಿಯ ಜೇಬಿನ ಪ್ಯಾಕೇಟ್‌ನಲ್ಲಿ ವಿವಿಧ ಮಕ್ಕಳ ಫೋಟೋ, ಗುರುತಿನ ಚೀಟಿ ಹಾಗೂ ಎಟಿಎಂ ಕಾರ್ಡ್ ಇದ್ದಿದ್ದನ್ನು ನೋಡಿದ ಗ್ರಾಮಸ್ಥರು, ಆತನನ್ನು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ.
ಈ ವಿಷಯ ಪೊಲೀಸರಿಗೆ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ 112 ವಾಹನದ ಪೊಲೀಸರು ಧಾವಿಸಿದ್ದಾರೆ. ಪೊಲೀಸರು ಬಂದರೂ ಆ ವ್ಯಕ್ತಿಯನ್ನು ಬಿಡದ ಗ್ರಾಮಸ್ಥರು ಪೊಲೀಸರ ಮುಂದೆಯೇ ಥಳಿಸಿದ್ದಾರೆ. ನಂತರ ಗ್ರಾಮಸ್ಥರನ್ನು ಬಿಡಿಸಿದ ಪೊಲೀಸರು, ಆ ವ್ಯಕ್ತಿಯನ್ನು ತಮ್ಮ ವಶಕ್ಕೆ ಪಡೆದು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಿದ್ದಾರೆ.
Kshetra Samachara
18/09/2022 07:21 pm