ಹುಬ್ಬಳ್ಳಿ: ವಿಧಿ ಯಾರ ಬಾಳಲ್ಲಿ ಹೇಗೆ ಆಟ ಆಡುತ್ತೆ ಅನ್ನೋದೆ ಗೊತ್ತಿಲ್ಲ. ಅಂತಹ ಕಷ್ಟದ ಸಮಯದಲ್ಲಿ ನಮ್ಮವರೆನಿಸಿಕೊಂಡವರೇ ನೆರವಾಗೋದಿಲ್ಲ. ಅಂತಹವರ ನಡುವೆ ಹುಬ್ಬಳ್ಳಿಯ ಈ ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಲೇಬೇಕು. ಅಷ್ಟಕ್ಕೂ ಆ ಮಹಾ ಕಾರ್ಯದಲ್ಲಿ ತೊಡಗಿದ ಯುವಕರು ಯಾರು? ಆ ಕೆಲಸ ಏನು ಅಂತೀರಾ ಈ ಸ್ಟೋರಿ ನೋಡಿ...
ಈ ವೃದ್ಧೆಯ ಹೆಸರು ಅನಿತಾ… ಮೂಲತಃ ಹುಬ್ಬಳ್ಳಿಯ ಹಳೇ ಹುಬ್ಬಳ್ಳಿಯವರು… ಹೋಂ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ ವಿಧಿ ಇವರ ಬಾಳಲ್ಲಿ ಬೇರೆ ಆಟವನ್ನೇ ಆಡಿ ಬಿಟ್ಟಿತು. ಕೆಲಸ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ತಮ್ಮ ಕಾಲು ಮೂಳೆಯನ್ನ ಮುರಿದುಕೊಂಡಿದ್ದು ಯಾವುದೇ ಕೆಲಸ ನಿರ್ವಹಿಸಲು ಆಗುತ್ತಿಲ್ಲ. ಇದೀಗ ಅನಿತಾರ ಬಾಳಿಗೆ ಈ ಯುವಕರೇ ದಾರಿದೀಪವಾಗಿದ್ದಾರೆ. ಹೌದು ಈ ಯುವಕರಿಗೆ ಅನಿತಾರ ವಿಷಯ ತಿಳಿಯುತ್ತಿದ್ದಂತೆ ಅವರ ಚಿಕಿತ್ಸೆಗೆ ಅನುಕೂಲ ಆಗುವಂತೆ, ಎಲ್ಲ ವ್ಯವಸ್ಥೆಗಳನ್ನ ಮಾಡಿ ಚಿಕಿತ್ಸೆಯನ್ನ ನೀಡಲಾಗಿತ್ತು. ಸದ್ಯಕ್ಕೆ ಅನಿತಾರಿಗೆ ಬೇಕಾಗಿರುವುದು ಆಶ್ರಯದ ವ್ಯವಸ್ಥೆ ಹಾಗೂ ಅವರ ಚಿಕಿತ್ಸೆ ಮತ್ತು ಜೀವನೋಪಾಯಕ್ಕೊಂದು ದಾರಿ ಆಗಬೇಕಿದೆ.
ಅಷ್ಟಕ್ಕೂ ಇವರಿಗೆ ಹೇಳ್ಕೋಬೇಕು ಅಂದ್ರೆ ತನ್ನವರು ಅಂತ ಯಾರು ಇಲ್ಲ. ಕುಟುಂಬಸ್ಥರು ಎಲ್ಲಿದ್ದಾರೋ ಗೊತ್ತಿಲ್ಲ ಅಂತಾರೆ. ಮನೆಯಲ್ಲಿ ಯಾರು ಇಲ್ಲದ ಈ ವೃದ್ಧೆಗೆ ಈ ಯುವಕರೇ ಆಸರೆ. ಸದ್ಯಕ್ಕೆ ಇವರ ಪರಿಸ್ಥಿತಿಯನ್ನ ನೋಡಿದರೆ ಎಂತಹವರ ಮನಸ್ಸು ಕೂಡ ಅಯ್ಯೋ ಎನ್ನದೇ ಇರುವುದಿಲ್ಲ. ಇಂತ ಒಂದು ದುಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಈ ಅನಿತಾ... ಸಹಾಯ ಮಾಡುವ ಸಹೃದಯಿಗಳು 8861459929 ಈ ನಂಬರ್ ಗೆ ಕರೆ ಮಾಡಬಹುದು...
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ವಿಶೇಷ, ಹುಬ್ಬಳ್ಳಿ
Kshetra Samachara
18/07/2022 01:22 pm