ಹುಬ್ಬಳ್ಳಿ: ಪ್ರತಿಯೊಬ್ಬರಿಗೆ ಒಂದಿಲ್ಲೊಂದು ರೀತಿಯಲ್ಲಿ ಹವ್ಯಾಸ ಇದ್ದೇ ಇರುತ್ತದೆ. ಆದರೆ, ಇಲ್ಲೊಬ್ಬರಿಗೆ ಮೀಸೆ ತಿರುವೋ ಹವ್ಯಾಸ ಜೋರಾಗಿದೆ.
ಹೌದು! ನೀವು ದೃಶ್ಯಗಳಲ್ಲಿ ನೋಡುತ್ತಿರುವ ವ್ಯಕ್ತಿಯ ಹೆಸರು ಶಿವಪ್ಪ. ಹುಬ್ಬಳ್ಳಿಯ ಗೋಕುಲ ರಸ್ತೆ ನಿವಾಸಿ. ವೃತ್ತಿಯಿಂದ ಖಾಸಗಿ ಕಂಪೆನಿಯ ಉದ್ಯೋಗಿಯೂ ಹೌದು. ಇವರಿಗೆ ಪ್ರತಿನಿತ್ಯ ಒಂದಿಲ್ಲ ಒಂದು ರೀತಿಯಲ್ಲಿ ಮೀಸೆ ತಿರುವೋ ಹವ್ಯಾಸ ಇದೆ.
28 ರೀತಿಯಲ್ಲಿ ಇವರು ಮೀಸೆ ತಿರುವಿಕೊಂಡು ಹೋಗುತ್ತಾರಂತೆ. ಹೀಗೇಕೆ ಮೀಸೆ ತಿರುವುತ್ತೀರಿ ಎಂದರೆ, ಹಾಗೇ ನನಗೆ ಹವ್ಯಾಸ ರೂಢಿಗೆ ಬಂತು ಹೀಗಾಗಿ ಪ್ರತಿನಿತ್ಯ ಒಂದಿಲ್ಲ ಒಂದು ರೀತಿಯಲ್ಲಿ ಮೀಸೆ ತಿರುವುತ್ತೇನೆ ಎನ್ನುತ್ತಾರೆ.
ಮೀಸೆ ತಿರುವಿದ ತಕ್ಷಣ ಅದು ಸಂಜೆವರೆಗೂ ಅದೇ ಸ್ಟೈಲ್‌ನಲ್ಲಿ ನಿಲ್ಲಲು ಸೀಗೆಪುಡಿ ಉಪಯೋಗಿಸುತ್ತೇನೆ ಎನ್ನುತ್ತಾರೆ ಶಿವಪ್ಪ. ಏನೇ ಆಗಲಿ ಶಿವಪ್ಪ ಅವರದ್ದು ಇದೊಂದು ವಿಚಿತ್ರ ಹವ್ಯಾಸವೇ ಸರಿ.
Kshetra Samachara
20/04/2022 04:15 pm