ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ದೇಹದಾನ ಮಾಡಿದ ಹುಬ್ಬಳ್ಳಿಯ ಯಾದವಾಡ ಕುಟುಂಬ

ಹುಬ್ಬಳ್ಳಿ: ಜೀವ ಇದ್ದಾಗ ರಕ್ತದಾನ,, ಜೀವ ಹೋದ ಮೇಲೆ ಅಂಗಾಗ ದಾನ" ಈ ಮಾತನ್ನು ಅಕ್ಷರಶಃ ಸತ್ಯ ಮಾಡಿದ್ದಾರೆ ಹುಬ್ಬಳ್ಳಿಯ ಯಾದವಾಡ ಕುಟುಂಬ.

ನಗರದ ಶಿರೂರ ಪಾರ್ಕ ನಿವಾಸಿ ಗಿರಿಜಾ ಯಾದವಾಡ ಎಂಬುವರು ನಿನ್ನೆ ಮನೆಯಲ್ಲಿಯೇ ನಿಧನ ಹೊಂದಿದ್ದರು. 70ನೇ ವಯಸ್ಸಿನಲ್ಲಿ ಸಹಜ ಸಾವನ್ನಪ್ಪಿದ್ದರಿಂದ ಅವರ ಕುಟುಂಬ ಸದಸ್ಯರು ಗಿರಿಜಾ ಅವರ ದೇಹವನ್ನು ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಡಾ.ರಾಮಣ್ಣನವರ ಚಾರಿಟೇಬಲ್ ಟ್ರಸ್ಟ್ ಮುಖಾಂತರ KLE ವಿಶವಿದ್ಯಾಲಯದ ಬಿ.ಎಂ.ಕ.ಆಯುರ್ವೇದಿಕ್ ಕಾಲೇಜ ದೇಹವನ್ನು ದಾನ ನೀಡಿದರು.

ಇಂದು ಮುಂಜಾನೆ 9ಘಂಟೆಗೆ ವಿಧಿವಿಧಾನಗಳ ಮೂಲಕ ಡಾ.ರಾಮಣ್ಣನವರ ಅವರು ಗಿರಿಜವ್ವ ಯಾದವಾಡ ಅವರ ಕುಟುಂಬ ದವರ ಜೊತೆ ಸಮಾಲೋಚನೆ ಮಾಡಿದರು. ಜೊತೆಗೆ ಶಿರೂರ ಪಾರ್ಕ ನಿವಾಸಿಗಳಿಗೆ ಅಂತಿಮ ದರ್ಶನಕ್ಕೆ ಆಗಮಿಸಿದ್ದ ಜನರಿಗೆ ದೇಹದಾನದಿಂದ ಎಷ್ಟೆಲ್ಲ ಉಪಯೋಗ ಆಗುತ್ತದೆ ಎಂಬುದನ್ನು ತಿಳಿಸಿಕೊಟ್ಟರು.

ಮೃತ ಗಿರಿಜವ್ವ ಯಾದವಾಡ ಅವರ ಕಣ್ಣುಗಳನ್ನು ಹುಬ್ಬಳ್ಳಿಯ MM ಜೋಶಿ ನೇತ್ರ ಬಂಢಾರಕ್ಕೆ ನೀಡಲಾಗಿದೆ. ಚರ್ಮವನ್ನು ಬೆಳಗಾವಿಯ KLE ಡಾ.ಪ್ರಭಾಕರ ಕೊರೆ ಆಸ್ಪತ್ರೆ ರೋಟರಿ ಚರ್ಮ ಭಂಡಾರಕ್ಕೆ ನೀಡಿ ದೇಹ ದಾನದ ಬಗ್ಗೆ ಜನರಲ್ಲಿ ಅರಿವನ್ನು ಮುಟ್ಟಿಸಿದ್ದಾರೆ.

Edited By : Shivu K
Kshetra Samachara

Kshetra Samachara

06/02/2022 01:27 pm

Cinque Terre

61.73 K

Cinque Terre

5

ಸಂಬಂಧಿತ ಸುದ್ದಿ