ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಿಶ್ವದಾಖಲೆ ಬರೆದ ಹಳ್ಳಿ ಹುಡುಗಿ: ಜಗತ್ತನೇ ತನ್ನತ್ತ ನೋಡುವಂತೆ ಮಾಡಿದ ಕವಿತಾ ಮೇದಾರ...!

ಹುಬ್ಬಳ್ಳಿ: ಆಕೆ ನಿಜಕ್ಕೂ ಕಿತ್ತು ತಿನ್ನುವ ಬಡತನದಲ್ಲಿ ಹುಟ್ಟಿದ ಹೆಣ್ಣುಮಗಳು. ಈಗ ಆಕೆ ವಿಶ್ವ ದಾಖಲೆಯಲ್ಲಿ ತನ್ನ ಹೆಸರನ್ನು ಬರೆದಿದ್ದಾಳೆ. ತೊಟ್ಟಿಲನ್ನು ತೂಗುವ ಕೈ ಜಗತ್ತನೇ ಆಳಬಲ್ಲದು ಎಂಬುವಂತ ಗಾದೆಗೆ ನಿದರ್ಶನ ಎಂಬಂತೆ ಈ ಮಹಿಳೆ ಸಾಧನೆ ಮಾಡಿದ್ದಾಳೆ. ಹಾಗಿದ್ದರೇ ಯಾರು ಆ ಮಹಿಳೆ...? ಅವಳು ಮಾಡಿದ ಸಾಧನೆ ಆದರೂ ಏನು ಅಂತೀರಾ ತೋರಸ್ತೀವಿ ನೋಡಿ...

ಸಾಮಾನ್ಯವಾಗಿ ದೊಡ್ಡ ದೊಡ್ಡ ಬಾರ್ ಗಳಲ್ಲಿ ಬಾರ್ ಟೆಂಡರ್ ಗಳನ್ನು ನೀವು ನೋಡಿರ್ತೀರಾ. ಅದರಲ್ಲಿ ಬಾರ್ ಟೆಂಡರ್ ಗಳ ಬಾಟಲಿ ತಿರುಗಿಸುವುದನ್ನು ನೋಡಿಯೇ ಹೌ ಹಾರಿರುತ್ತೇವೆ. ಅಂಥದ್ದರಲ್ಲಿ ಇಲ್ಲೊರ್ವ ಯುವತಿ ಗ್ರಾಮೀಣ ಪ್ರದೇಶದಿಂದ ಬಂದು ಇದೀಗ ವಿಶ್ವ ದಾಖಲೆ ಬರೆದಿದ್ದಾಳೆ. ಹೌದು. ಹೀಗೆ ಗಿರ ಗಿರ ಅಂತ ಬಾಟಲಿಗಳಲ್ಲಿ ತಿರುಗಿಸುತ್ತ ನೋಡುಗರನ್ನು ಅಚ್ಚರಿಗೆ ಒಳಪಡಿಸುವ ಇವರು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬೆಟದೂರು ಗ್ರಾಮದ ಕವಿತಾ ಮೇದಾರ ಅಂತ. ಹೀಗೆ ಇವರ ಈ ಕಲೆಗೆ ಜಗ್ಲಿಂಗ್ ಮತ್ತು ಫೆರಿಂಗ್ ಅಂತ ಹೆಸರು. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಅಥವಾ ದೊಡ್ಡ ದೊಡ್ಡ ಪಬ್, ಬಾರ್ ಗಳಲ್ಲಿ ಈ ರೀತಿಯಾಗಿ ಹುಡುಗರು ತಿರುಗಿಸುವುದನ್ನ ನೀವು ನೋಡಿರ್ತೀರಾ. ಆದರೆ ಇದನ್ನು ಈ ಯುವತಿ ಕಲಿತಿದ್ದು,‌ಇದರಲ್ಲಿಯೇ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸಾಧನೆ ಮಾಡಿದ್ದಾಳೆ. ಅಲ್ಲದೆ ಭಾರತದಲ್ಲಿಯೇ ಜಗಲಿಂಗ್ ಆ್ಯಂಡ್ ಫೇರಿಂಗ್ ನಲ್ಲಿ ದಾಖಲೆ ಬರೆದ ಮೊದಲ ಮಹಿಳೆ ಎಂಬ ಕೀರ್ತಿಗೆ ಇವರು ಪಾತ್ರರಾಗಿದ್ದಾರೆ.

ಇನ್ನೂ ಇದನ್ನೆಲ್ಲ ಕಲಿಬೇಕು ಅಂತ ಸುಮ್ಮನೆ ಮಾತಲ್ಲಿ ನೋಡೋಕೆ ಎಷ್ಟು ರೋಮಾಂಚನವಾಗುತ್ತದೆಯೋ ಇದನ್ನು ಕಲಿಯೋದು ಅಷ್ಟೇ ಟಫ್ ಕೂಡ. ಲಾಕ್ ಡೌನ್ ಸಮಯವನ್ನು ಸದುಪಯೋಗ ಪಡಿಸಿಕೊಂಡ ಕವಿತಾ ಪುಣೆಯಲ್ಲಿ ಟ್ರೈನಿಂಗ್ ಪಡೆದು ಸದ್ಯ ವಿಶ್ವ ಬುಕ್ ಆಫ್ ರೆಕಾರ್ಡ್ ನಲ್ಲಿ ತಮ್ಮ ಹೆಸರನ್ನು ಅಚ್ಚೊತ್ತಿದ್ದಾಳೆ. ಸ್ವಿಟ್ಜರ್ಲ್ಯಾಂಡ್ ನಲ್ಲಿ ನಡೆಯುವ ಸ್ಪರ್ಧೆಗೆ ಈಗಾಗಲೇ ಕವಿತಾ ಆಯ್ಕೆಯಾಗಿದ್ದರು. ಆದರೆ ಹಣದ ತೊಂದರೆ ಆಗಿತ್ತು. ಅದೃಷ್ಟವಶಾತ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ತಂಡ ಭಾರತಕ್ಕೆ ಬಂದು ಸ್ಪರ್ಧೆ ಏರ್ಪಡಿಸಿ ಮಹಿಳೆಯ ದಾಖಲೆಗೆ‌ ಮುನ್ನುಡಿ ಬರೆದಿದ್ದಾರೆ. ಇವಳ ಸಾಧನೆ ಭಾರತ ಮಾತ್ರವಲ್ಲದೆ ಜಗತ್ತಿನ ಪ್ರಶಂಸೆಗೆ ಪಾತ್ರವಾಗುವಂತೆ ಮಾಡಿದೆ.

ಮಹಿಳೆ ಅಂದರೇ ಮನೆಯ ಕೆಲಸಕ್ಕೆ ಮಾತ್ರ ಸೀಮಿತವಾಗದೆ ಹೊಸ ಸಾಧನೆ ಮಾಡಬೇಕು ಎಂಬುವುದನ್ನು ‌ಕವಿತಾ ತೋರಿಸಿಕೊಟ್ಟಿದ್ದಾರೆ. ಕವಿತಾಳ ಕೀರ್ತಿ ಇನ್ನಷ್ಟು ವ್ಯಾಪಿಸಲಿ. ಸರ್ಕಾರ ಏನಾದರೂ ಸಹಾಯ ಸೌಲಭ್ಯಗಳನ್ನು ನೀಡಲಿ ಎಂಬುವುದು ನಮ್ಮ ಆಶಯ..

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

20/01/2022 10:13 am

Cinque Terre

82.33 K

Cinque Terre

35

ಸಂಬಂಧಿತ ಸುದ್ದಿ