ಕುಂದಗೋಳ: ವಿಧಿಯ ಆಟವೋ, ಆ ದೇವರ ಶಾಪವೋ ಗೊತ್ತಿಲ್ಲಾ ಇಲ್ಲೋಂದು ಕುಟುಂಬದ ಮಗಳು ಓದಿ ಸಾಧನೆ ಮಾಡುವ ವಯಸ್ಸಲ್ಲಿ ತನ್ನ ತಂಗಿಗೆ ತಾಯಿಯಾಗಿ, ಮನೆಗೆ ಹಿರಿಯಳಾಗಿ ಕುಟುಂಬ ಸಲಹಲು ಶಿಕ್ಷಣ ಬಿಟ್ಟು ಜೋಳಿಗೆ ತೂಗುವ ಸ್ಥಿತಿಗೆ ಬಂದಿದ್ದಾಳೆ.
ಇನ್ನೂ ತಂದೆ ಇದ್ದ ಕೃಷಿ ಜಮೀನು ಉಪಯೋಗಕ್ಕೆ ಬಾರದೆ ಕೂಲಿ ನಾಲಿ ಮಾಡಿ ತನ್ನ ಒಂದೂವರೆ ವರ್ಷದ ಮಗುವಿಗೆ ಹಾಲು ತರಲಾಗದ ಸ್ಥಿತಿಯಲ್ಲಿ ಇದ್ದಾನೆ. ಅಬ್ಬಾ ! ಇದ್ಯಾವ ಬದುಕು ಎಂದು ಅಕ್ಷರಶಃ ಈ ಪರಿಸ್ಥಿತಿ ನೋಡಿದವರ ಕಣ್ಣಾಲೆಯಲ್ಲಿ ಹನಿ ನೀರು ಹೇಳದೆ ಜಾರಿ ಹೋಗಿದೆ.
ಕುಂದಗೋಳ ತಾಲೂಕಿನ ನೆಲಗುಡ್ಡ ಗ್ರಾಮದ ಈ ಗುರುಶಿದ್ಧಪ್ಪ ಗಾಣಿಗೇರ ಪತ್ನಿ ಮಗಳ ಜೊತೆ ಚೆನ್ನಾಗಿ ಬದುಕು ನಡೆಸುವಾಗ ಪತ್ನಿ ಜಯವ್ವನಿಗೆ 17 ವರ್ಷಕ್ಕೆ ಮತ್ತೋಬ್ಬ ಮಗಳು ಜನಿಸಿದಳು ಈ ಖುಷಿಯಲ್ಲಿರುವಾಗಲೇ ದುರ್ವಿಧಿ ಅನಾರೋಗ್ಯದ ಕಾರಣ ಕೊಟ್ಟು ಆರು ತಿಂಗಳ ಹಿಂದಷ್ಟೇ ಪತ್ನಿ ಜಯವ್ವನ ಪ್ರಾಣ ಪಕ್ಷಿ ಕಸಿದುಕೊಂಡಿತು.
ಅಕಾಲಿಕ ಮಳೆಗೆ ಬಿದ್ದ ಕಾರಣ ರಸ್ತೆ ಬದಿ ಈ ಗುಡಿಸಲಲ್ಲಿ ದೊಡ್ಡ ಮಗಳು ಗೀತಾ ಶಿಕ್ಷಣ ಕೈ ಬಿಟ್ಟು ತನ್ನ ತಂಗಿಗೆ ತಾನೇ ತಾಯಿ ಸ್ಥಾನದಲ್ಲಿ ನಿಂತು ಲಾಲನೆ ಪಾಲನೆ ಜೊತೆ ಮನೆ ನಿರ್ವಹಣೆ ಸಿದ್ಧಳಾದಳು ತಂದೆ ಅದೇ ಕೂಲಿ ಪುಡಿಗಾಸಿಗೆ ಶರಣಾದ.
ಆದ್ರೇ ವಾಸಕ್ಕೆ ಸೂರು, ಬದುಕಿಗೆ ಶಿಕ್ಷಣ ಅಷ್ಟೇ ಯಾಕೆ ಸ್ವಾಮಿ ಕುಟುಂಬ ನಿರ್ವಹಣೆ ಇವರಿಗೆ ಈಗ ಸವಲಾಗಿದ್ದು, ಈ ಜೋಪಡಿ ಗುಡಿಸಲಲ್ಲಿ ಜೋಳಿಗೆ ಕಟ್ಟಿ ವಯಸ್ಸಿಗೆ ಬಂದ ಮಗಳೊಬ್ಬಳು ತನ್ನ ತಂಗಿಯನ್ನು ಸಲಹುವುದು ಕಷ್ಟವಾಗಿ ಮನೆ ಕಟ್ಟಲಾಗದೆ ಕಣ್ಣಿರಲ್ಲಿ ಕೈ ತೊಳೆದು ಆರ್ಥಿಕ ಸಹಾಯದ ಕೇಳುತ್ತಿದ್ದಾರೆ.
ಈ ಬಡ ಕುಟುಂಬಕ್ಕೆ ಸಹಾಯದ ಅವಶ್ಯಕತೆ ಇದ್ದು 8105054640 ಅಥವಾ 9164131284 ಕರೆ ಮಾಡಿ ನಿಮ್ಮ ಕೈಲಾದ ಸಹಾಯ ಮಾಡಬಹುದು.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
Kshetra Samachara
12/12/2021 02:25 pm