ಧಾರವಾಡ: ದುಡಿದು ತಿನ್ನಬೇಕು ಎಂದು ಮನಸ್ಸು ಮಾಡಿದರೆ ಎಂತವರೂ ಸಹಿತ ದುಡಿಮೆಗೆ ಮುಂದಾಗಿ ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಾರೆ. ಆದರೆ, ದುಡಿಯದೇ ಊರಿಗೆ ಮಾರಿಯಾಗಿ ಮನೆಗೆ ದಂಡಪಿಂಡನಾಗಿ ಅಲೆದಾಡುವ ಸೋಮಾರಿಗಳಿಗೆ ಇದೊಂದು ವೀಡಿಯೋ ನಿದರ್ಶನವಾಗುತ್ತದೆ.
ಈ ವೀಡಿಯೋ ನೋಡಿದಾಗ ನಿಮಗೆ ಏನೆನ್ನಿಸುತ್ತದೆ ಎಂಬುದನ್ನು ಅಕ್ಷರಗಳಲ್ಲಿ ವರ್ಣಿಸಲಿಕ್ಕಾಗದು. ಇಳಿ ವಯಸ್ಸು. ದುಡಿಯದಿದ್ದರೆ ಆ ದಿನ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ. ಇಳಿ ವಯಸ್ಸಿನ ಈ ವ್ಯಕ್ತಿ ತಳ್ಳುವ ಗಾಡಿ ಜಗ್ಗಿಕೊಂಡು ಪ್ರತಿನಿತ್ಯ ಕಿರಾಣಿ ಸಾಮಾನುಗಳನ್ನು ಅಂಗಡಿಯಿಂದ ಅಂಗಡಿಗೆ ಸಾಗಿಸುವ ಕೆಲಸ ಮಾಡುತ್ತಾರೆ. ಅನಾರೋಗ್ಯವಿದ್ದರೂ ಕೆಲಸ ಮಾಡಲೇಬೇಕು. ಬೇರೆ ದಾರಿಯೇ ಇಲ್ಲ. ದುಡಿಯದೇ ಕಟ್ಟೆಯ ಮೇಲೆ ಕಾಲಹರಣ ಮಾಡುವ ಸೋಮಾರಿಗಳೇ ವೀಡಿಯೋದಿಂದಲಾದರೂ ನಿಮ್ಮ ಮನಸ್ಸು ಪರಿವರ್ತನೆಯಾಗಲಿ. ಅಂದ ಹಾಗೆ ಈ ದೃಶ್ಯ ಕಂಡು ಬಂದದ್ದು ಹುಬ್ಬಳ್ಳಿ ಮಾರುಕಟ್ಟೆಯಲ್ಲಿ
Kshetra Samachara
08/12/2021 04:25 pm