ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ: ಇದೊಬ್ಬ ಮಗನನ್ನು ಕಳೆದುಕೊಂಡು ಕೆಲಸವನ್ನು ಕಳೆದುಕೊಂಡ ಜೀವನ ನಡೆಸುವುದೇ ಕಷ್ಟದಲ್ಲಿದ ತಾಯಿಗೆ ಈಗ ಪಬ್ಲಿಕ್ ನೆಕ್ಸ್ಟ್ ವರದಿಯಿಂದ ಕೆಲಸ ತೊರೆತಿದ್ದು, ಇದು ನಿಮ್ಮ ಪಬ್ಲಿಕ್ ನೆಕ್ಸ್ಟ್ ನ ಬಿಗ್ ಇಂಪ್ಯಾಕ್ಟ್ ಆಗಿದೆ..
ಹೌದು.. ಸರಸ್ವತಿ ಕಳ್ಳಿ ಎಂಬುವವರೇ ಹುಬ್ಬಳ್ಳಿಯ ಗೃಹರಕ್ಷಕ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಏಕಾಏಕಿ ಅಧಿಕಾರಿಗಳ ದರ್ಪದಿಂದ ಸರಸ್ವತಿ ಕೆಲಸ ಕಳೆದುಕೊಂಡು ಜೀವನ ನಡೆಸುವುದೇ ಕಷ್ಟ ಎಂಬುವಂತ ಪರಿಸ್ಥಿತಿಯಲ್ಲಿ ಅಕ್ಕಪಕ್ಕದ ಮನೆಯವರು ನೀಡಿದ ಊಟವನ್ನು ತಿಂದು ಜೀವನ ನಡೆಸುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಕುರಿತು ನಿಮ್ಮ ಪಬ್ಲಿಕ್ ನೆಕ್ಸ್ಟ್ ಸರಸ್ವತಿ ಕಳ್ಳಿಯವರ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು 'ಅಯ್ಯೋ ದುರ್ವಿಧಿಯೇ ನಿನೆಷ್ಟು ಕ್ರೂರಿ: ಇದ್ದೊಬ್ಬ ಮಗನೂ ಇಲ್ಲ ಕೆಲಸವೂ ಇಲ್ಲ ಏನಿದು ನಿನ್ನ ಆಟ' ಎಂಬುವಂತ ವರದಿಯಿಂದ ಅಧಿಕಾರಿಗಳ ಗಮನಕ್ಕೆ ತರುವ ಕಾರ್ಯವನ್ನು ಮಾಡಿತ್ತು. ವರದಿಯಿಂದ ಎಚ್ಚೇತ್ತುಕೊಂಡ ಅಧಿಕಾರಿಗಳ ತಕ್ಷಣವೇ ಕಾರ್ಯಪ್ರವೃತ್ತರಾಗಿ ಸರಸ್ವತಿ ಕಳ್ಳಿಯವರಿಗೆ ಮತ್ತೇ ಗೃಹರಕ್ಷಕ ದಳದಲ್ಲಿ ಕೆಲಸ ಮಾಡಲು ಅವಕಾಶವನ್ನು ಕಲ್ಪಿಸಿದ್ದು, ಇದು ಪಬ್ಲಿಕ್ ನೆಕ್ಸ್ಟ್ ವರದಿಗೆ ಬಂದ ಫಲಶೃತಿಯಾಗಿದೆ.
ಹೀಗೆ ರಸ್ತೆ ಮಧ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗೃಹರಕ್ಷಕ ಸಿಬ್ಬಂದಿಯೇ ಸರಸ್ವತಿ ಕಳ್ಳಿ ಸುಮಾರು ದಿನಗಳ ಹಿಂದೆ. ಮುಖದಲ್ಲಿ ಯಾವುದೇ ನಗು ಇಲ್ಲದೇ ಜೀವನವೇ ಕಷ್ಟದ ಕವಲು ದಾರಿ ಎಂದುಕೊಂಡಿದ್ದ ಈ ತಾಯಿಗೆ ಪಬ್ಲಿಕ್ ನೆಕ್ಸ್ಟ್ ವರದಿಯಿಂದ ಜೀವನಕ್ಕೆ ಒಂದು ದಾರಿಯಾಗಿದೆ.
ಒಟ್ಟಿನಲ್ಲಿ ಹಿಡಿದ ಕಾರ್ಯವನ್ನು ಬಿಡದೇ ನಿಮ್ಮ ಪಬ್ಲಿಕ್ ನೆಕ್ಸ್ಟ್ ಸಾರ್ವಜನಿಕರ ಸೇವೆಗೆ ಮುಂದಾಗುತ್ತಿದ್ದು, ನಿಮ್ಮೆಲ್ಲರ ಸಹಕಾರ ಮತ್ತಷ್ಟು ಅವಶ್ಯಕ ಎಂಬುವುದೇ ಪಬ್ಲಿಕ್ ನೆಕ್ಸ್ಟ್ ನ ಆಶಯ.
Kshetra Samachara
15/11/2021 07:43 pm