ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ವೃದ್ಧಾಶ್ರಮದ ಹಿರಿಯ ಜೀವಿಗಳ ಬಾಳಲ್ಲಿ ಬೆಳಗಿತು ದೀಪಾವಳಿ ಜ್ಯೋತಿ

ಹುಬ್ಬಳ್ಳಿ : ದೀಪಾವಳಿ ಹಬ್ಬದ ಸಂಭ್ರಮದ ದಿನ ನಾವು ನೀವೂ ನಮ್ಮ ಮನೆಯಲ್ಲಿ ದೀಪ ಬೆಳಗಿಸಿ ಖುಷಿ ಪಟ್ಟರೇ ಇಲ್ಲೊಂದು ಕುಟುಂಬಸ್ಥರು ಮತ್ತೊಬ್ಬರ ಮನದ ದೀಪ ಬೆಳಗಿಸಿ ಖುಷಿ ಕೊಡುವ ಕೆಲಸ ಮಾಡಿದ್ದಾರೆ.

ಹೌದು ! ಸಂಬಂಧಗಳನ್ನೇ ಮರೆತು, ತನ್ನವರನ್ನೇ ದೂರ ಮಾಡಿಕೊಂಡು ವೃದ್ಧಾಶ್ರಮ ಸೇರಿದ ಹುಬ್ಬಳ್ಳಿ ನವನಗರದ ಮೈತ್ರಿ ಅಸೋಸಿಯೇಷನ್ ಮೈತ್ರಿ ವೃದ್ಧಾಶ್ರಮದ ಅದೆಷ್ಟೋ ಹಿರಿಜೀವಗಳಿಗೆ ತನ್ನ ದುಡಿಮೆಯಲ್ಲೇ ಸಮಾಜ ಸೇವೆ ಮಾಡುವ ಸಮಾಜಸೇವಕ ಮಂಜುನಾಥ ಎಂಟ್ರೂವಿ ಹೊಸ ಬಟ್ಟೆ, ಸೀರೆ ಹಾಗೂ ಸಿಹಿ ವಿತರಿಸಿ ದೀಪಾವಳಿ ಸಂಭ್ರಮವನ್ನು ಪರೋಪಕಾರದ ಮೂಲಕ ವೃದ್ಧಾಶ್ರಮದಲ್ಲಿ ಆನಂದದ ಜ್ಯೋತಿ ಬೆಳಗಿಸಿದ್ದಾರೆ.

ಒಟ್ಟಾರೆ ಹಬ್ಬದ ಸಂಭ್ರಮವನ್ನೂ ನಮ್ಮ ನಮ್ಮ ಮನೆಗಳಲ್ಲಿ ಆಚರಿಸುವ ಬದಲಾಗಿ ಮತ್ತೊಬ್ಬರ ಮನದಲ್ಲಿ ಆನಂದದ ಜ್ಯೋತಿ ಬೆಳಗಿಸಿದ ಇವರಿಗೆ ಭೇಷ್ ಎನ್ನಲೇಬೇಕು.

Edited By : Nagesh Gaonkar
Kshetra Samachara

Kshetra Samachara

05/11/2021 10:44 pm

Cinque Terre

63.32 K

Cinque Terre

29

ಸಂಬಂಧಿತ ಸುದ್ದಿ