ಹುಬ್ಬಳ್ಳಿ: ನಮಗೆ ಕೆಂಪು ಮಂಗಗಳು ತುಂಬಾ ಫ್ರೆಂಡ್ಲಿ ಆಗಿಯೇ ಕಾಣುತ್ತವೆ. ಆದರೆ ಕಪ್ಪು ಮಂಗಗಳು ಅಂದ್ರೆ, ನಮ್ಗೆ ಅವುಗಳ ಬಗ್ಗೆ ಸಾಕಷ್ಟು ಭಯಾನೇ ಇರುತ್ತದೆ. ಹುಬ್ಬಳ್ಳಿಯ ನವನಗರದಲ್ಲಿ ಒಬ್ಬ ಹಿರಿಯ ವ್ಯಕ್ತಿ ಇದ್ದಾರೆ. ಇವರು ಕಪ್ಪು ಮಂಗಗಳನ್ನ ಅತೀವ ಕಾಳಜಿಯಿಂದಲೇ ನೋಡಿಕೊಳ್ಳುತ್ತಾರೆ. ಯಾವಾಗ ಕಪ್ಪು ಮಂಗಗಳು ತಮ್ಮ ಅಂಗಡಿ ಎದುರಿನ ಕಂಪೌಡ್ ಮೇಲೆ ಬಂದು ಕುಳಿತುಕೊಳ್ಳುತ್ತವೇಯೋ, ಆಗ ಬಂದು ಅವುಗಳಿಗೆ ಅತೀವ ಪ್ರೀತಿಯಿಂದಲೇ ಆಹಾರ ಕೊಡ್ತಾರೆ. ಬನ್ನಿ, ಹೇಳುತ್ತೇವೆ ಈ ಪುಟ್ಟ ಸ್ಟೋರಿ.
ನವನಗರದ ಪೊಲೀಸ್ ಸ್ಟೇಷನ್ ಬಳಿ ಒಂದು ಅರಿವೆ ಅಂಗಡಿ ಇದೆ. ಈ ಅಂಗಡಿ ಮಾಲೀಕ ವಾನರ ಪ್ರಿಯ ಮಾನವರೇ ಸರಿ. ಕಪ್ಪು ಮಂಗಗಳನ್ನ ಅತೀವ ಪ್ರೀತಿಯಿಂದಲೇ ನೋಡಿಕೊಳ್ತಾರೆ. ಆಹಾರ ಬೇಕಾದಾಗ ಬಂದು ಕುಳಿತುಕೊಳ್ಳುವ ಆ ಕಪ್ಪು ಮಂಗಗಳನ್ನ ಮನುಷ್ಯರ ಥರವೇ ನೋಡುತ್ತಾರೆ.ಅವುಗಳಿಗೆ ತಮ್ಮ ಕೈಯಿಂದಲೇ ಆಹಾರ ಕೊಟ್ಟು ಖುಷಿಪಡುತ್ತಾರೆ. ಈ ವಿಶೇಷ ವ್ಯಕ್ತಿ ನಿಮಗೆ ಇಲ್ಲಿಯ ಶ್ರೀ ಬಾಲಾಜಿ ಹೆಸರಿನ ಅರಿವೆ ಅಂಗಡಿಗೆ ಹೋದ್ರೆ ಅಲ್ಲಿಯೇ ಗಲ್ಲಾಪೆಟ್ಟಿಗೆ ಮೇಲೆ ಕುಳಿತಿರುತ್ತಾರೆ ಈ ವಿಶೇಷ ಮ್ಯಾನ್
-ರೇವನ್ ಪಿ.ಜೇವೂರ್ PublicNext ಹುಬ್ಬಳ್ಳಿ
Kshetra Samachara
14/10/2021 10:27 am