ಧಾರವಾಡ: ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಲು ಹೋಗಿ ಹಗ್ಗ ಹರಿದು ಆಳವಾದ ಬಾವಿಗೆ ವ್ಯಕ್ತಿಯೋರ್ವರು ಬಿದ್ದ ಘಟನೆ ಧಾರವಾಡದ ಸಾಧನಕೇರಿಯಲ್ಲಿ ನಡೆದಿದೆ.
ಸಾಧನಕೇರಿಯ ವೆಂಕಟೇಶ್ವರ ದೇವಸ್ಥಾನದ ಬಾವಿಯೊಂದರಲ್ಲಿ ಬೆಕ್ಕು ಬಿದ್ದಿತ್ತು. ವಿಷಯ ತಿಳಿದು ವನ್ಯಜೀವಿ ರಕ್ಷಕ ಸೋಮಶೇಖರ್ ಚನ್ನಶೆಟ್ಟಿ ಎಂಬುವರು ಬೆಕ್ಕನ್ನು ರಕ್ಷಿಸಲು ಮುಂದಾಗಿದ್ದರು. ಹಗ್ಗದ ಸಹಾಯದಿಂದ ಸೋಮಶೇಖರ್ ಬಾವಿಗೆ ಇಳಿದಿದ್ದರು. ಈ ವೇಳೆ ಹಗ್ಗ ತುಂಡಾಗಿ ಸೋಮಶೇಖರ್ ಆಳವಾದ ಬಾವಿಗೆ ಬಿದ್ದಿದ್ದರು. ಬಳಿಕ ಗೆಳೆಯರೆಲ್ಲ ಸೇರಿ ಬೆಕ್ಕಿನ ಸಮೇತ ಅವರನ್ನು ರಕ್ಷಿಸಿದ್ದಾರೆ.
Kshetra Samachara
09/10/2021 04:08 pm