ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಕಲ್ಪವೃಕ್ಷದ ಫಲದಲ್ಲಿ ಕಲೆ ಅರಳಿಸಿದ ಕಲಾವಿದ ಯಲ್ಲಪ್ಪ ಮೊರಬದ !

ಕುಂದಗೋಳ : ಕಲಾ ಸರಸ್ವತಿ ಯಾರಿಗೆ ಯಾವ ರೂಪದಲ್ಲಿ ಒಲಿಯುತ್ತಾಳೋ ಗೊತ್ತಿಲ್ಲ, ಅದರಂತೆ ಇಲ್ಲೊಬ್ಬರು ತಮಗೆ ಸಿದ್ಧಿಯಾದ ವಿಶಿಷ್ಟ ಕಲೆ ಮೂಲಕ ಕಲ್ಪವೃಕ್ಷದ ಫಲದಲ್ಲಿ ಕಲಾಕೃತಿ ರಚಿಸಿದ್ದಾರೆ. ಕೇವಲ ಒಂದು ಗಂಟೆಯಲ್ಲಿ ವಿಶೇಷ ಎನಿಸುವ ಕಲಾಕೃತಿ ಅರಳಿಸುವ ಜಾಣ್ಮೆ ಜಾಡು ಹಿಡಿದು ರಾಜ್ಯಾದ್ಯಂತ ಸಂಚರಿಸಿ ಕಾರ್ಯಕ್ರಮ ನೀಡುತ್ತಾ ಹೆಸರಾಗಿದ್ದಾರೆ.

ಇವರ ಹೆಸರು ಯಲ್ಲಪ್ಪ ನಾಗಪ್ಪ ಮೊರಬದ .ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದವರು .ಮೆಟ್ರಿಕ್ ಶಿಕ್ಷಣಕ್ಕೆ ಶಾಲೆ ಬಿಟ್ಟ ಇವರನ್ನು ಕಲಾ ಸರಸ್ವತಿ ಕೈ ಹಿಡಿದಿದ್ದು ಸಣ್ಣವರಿದ್ದಾಗ.ಮೊದಲು ಮಣ್ಣಿನಲ್ಲಿ ವಿವಿಧ ಕಲಾಕೃತಿ ಬಿಡಿಸಲು ಆರಂಭಿಸಿದ ಇವರು ಬುದ್ಧಿ ಬೆಳೆದಂತೆ ಆಲೂಗಡ್ಡೆಯಲ್ಲಿ ವಿವಿಧ ಕಲಾಕೃತಿ ಬಿಡಿಸುತ್ತಾ ಸಧ್ಯ ತೆಂಗಿನಕಾಯಿಯಲ್ಲಿ ಇಲ್ನೋಡಿ ಈ ರೀತಿ ಅಪ್ಪಟ ಎಂದಿಗೂ ಬಣ್ಣ ಮಾಸದ ಕಲಾಕೃತಿ ಬಿಡಿಸುತ್ತಾ ಇಡೀ ರಾಜ್ಯವನ್ನೇ ಸುತ್ತಿ ಎಲ್ಲೆಡೆ ಕಾರ್ಯಕ್ರಮ ನೀಡಿ ನೆರೆದವರಿದವರಿಂದ ಸೈ ಎನಿಸಿಕೊಂಡಿದ್ದಾರೆ.

ವಿಶೇಷ ಎಂದ್ರೇ ಯಾವುದೇ ಮನುಷ್ಯರ ಭಾವಚಿತ್ರ ನೋಡಲಿ ಥೇಟ್ ಆ ಭಾವಚಿತ್ರದಂತೆ ತೆಂಗಿನಕಾಯಿಯಲ್ಲಿ ಕಲೆ ಬಿಡಿಸುವ ಇವರು ದೇವರ ಮೂರ್ತಿಗಳು, ಸ್ವಾಮೀಜಿಗಳು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಸೇರಿದಂತೆ ರಾಜಕಾರಣಿಗಳು, ಪ್ರಾಣಿ ಪಕ್ಷಿ ಸೇರಿದಂತೆ ಸಿನಿಮಾ ನಟ-ನಟಿಯರ ಕಲಾಕೃತಿ ತಯಾರಿಸುತ್ತಾರೆ.

ಈಗಾಗಲೇ ತಮ್ಮ ಕಲೆಯ ಪ್ರದರ್ಶನ ಭಾಗವಾಗಿ ಹಲವಾರು ಸಭೆ ಸಮಾರಂಭಗಳಲ್ಲಿ ಭಾಗವಹಿಸಿ ಕಲಾ ಪ್ರದರ್ಶನ ನೀಡಿ ವಿವಿಧ ಪ್ರಶಸ್ತಿ ಸನ್ಮಾನಕ್ಕೆ ಭಾಜನರಾದ ಇವರು ತಮ್ಮ ಹಳ್ಳಿ ಮಕ್ಕಳು ಸೇರಿದಂತೆ ಆಸಕ್ತರಿಗೆ ಉಚಿತವಾಗಿ ಕಲಾ ತರಬೇತಿ ನೀಡುವ ಆಶೋತ್ತರ ಹೊಂದಿದ್ದಾರೆ.

ಇದಲ್ಲದೆ ಮಠಾಧೀಶರು, ರಾಜಕಾರಣಿಗಳು ಸೇರಿದಂತೆ ಹಲವರಿಗೆ ಹಾರ ತುರಾಯಿ ಬದಲಾಗಿ ತಾವು ತಯಾರಿಸಿದ ಕಲಾಕೃತಿ ನೀಡುತ್ತಾ ತಮ್ಮೂಲ್ಲಿರುವ ಕಲೆ ಪರಿಚಯದ ಜೊತೆ ಆಸಕ್ತರಿಗೆ ಆ ಕಲೆ ಕಲಿಸುವ ಪ್ರಯತ್ನ ಮಾಡುತ್ತಾ ಮಾದರಿಯಾಗಿದ್ದಾರೆ.

ಶ್ರೀಧರ ಪೂಜಾರ,ಪಬ್ಲಿಕ್ ನೆಕ್ಸ್ಟ್

Edited By : Manjunath H D
Kshetra Samachara

Kshetra Samachara

04/10/2021 03:43 pm

Cinque Terre

21.66 K

Cinque Terre

3

ಸಂಬಂಧಿತ ಸುದ್ದಿ