ಕುಂದಗೋಳ : ಇಲ್ಲೋಬ್ಬ ಬಾಲಕಿ ಪಟಪಟನೆ ಅಳ್ಳು ಹುರಿದಂತೆ ಮಾತನಾಡುವ ಶೈಲಿ, ಕೇಳಿದ ಪ್ರಶ್ನೇಗೆ ಥಟ್ಟನೆ ಉತ್ತರ ಹೇಳುವ ಕೌಶಲ್ಯಕ್ಕೆ ಡಾಕ್ಟರೇಟ್ ಪಡೆದಿದ್ದಲ್ಲದೆ ನಟ ಸಾರ್ವಭೌಮ ಡಾ. ರಾಜಕುಮಾರ ನಟಿಸಿದ ಎರೆಡು ನೂರಕ್ಕೂ ಅಧಿಕ ಸಿನಿಮಾಗಳ ಹೆಸರನ್ನು ಕೇವಲ 3 ನಿಮಿಷ 8 ಸೆಕೆಂಡುಗಳಲ್ಲಿ ಹೇಳಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕಡೆಯಿಂದ ಸೈ ಎನಿಸಿಕೊಂಡು ಉಡುಗೊರೆ ಪಡೆದು ತಂದೆ ತಾಯಿಗೆ ಕೀರ್ತಿ ತಂದಿದ್ದಾಳೆ.
ಏನಪ್ಪಾ ಈ ಬಾಲಕಿ ವಿಶೇಷ ಆರನೇ ವಯಸ್ಸಿನಲ್ಲಿ ಅದ್ಹೇಗೆ ಡಾಕ್ಟರೇಟ್ ? ಎಂದು ಆಶ್ಚರ್ಯ ಪಟ್ರಾ, ಎಸ್ ಆಶ್ಚರ್ಯ ಎನಿಸಿದ್ರೂ ನಾವು ಹೇಳುತ್ತಿರೋ ವಿಚಾರ ಸತ್ಯ.
ಕುಂದಗೋಳ ಪಟ್ಟಣದ ತಾಯಿ ಅರುಣಾ ತಂದೆ ಈಶ್ವರ ದಂಪತಿಗಳ ಮುದ್ದು ಮಗಳೇ ಈ ಶ್ರೀಶಾ ಮುದಗಣ್ಣನವರ, ತಾನು ಮೂರು ವರ್ಷದವಳಿದ್ದಾಗ ತಾಯಿಯಿಂದ ಒಲಿದ ಕಲಿಕಾ ಪ್ರಜ್ಞೆ ಸತತ ಅಭ್ಯಾಸ ಇಂದು ಇವಳಿಗೆ ಆರನೇ ವಯಸ್ಸಿನಲ್ಲಿ ಡಾಕ್ಟರೇಟ್ ಓಲಿಯುವಂತೆ ಮಾಡಿದ್ದು, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಪ್ರಶ್ನೇ ಸೇರಿ ಕವಿ, ವಚನ, ಸಾಹಿತ್ಯ, ಮಂತ್ರ ಪ್ರಾಣಿ, ಪಕ್ಷಿ ಹೀಗೆ ಪ್ರತಿಯೊಂದು ಕ್ಷೇತ್ರದ ಪ್ರಶ್ನೇಗಳಿಗೆ ಈ ಬಾಲಾಕಿ ನಿರರ್ಗಳವಾಗಿ ಉತ್ತರ ಹೇಳ್ತಾಳೆ.
ಇನ್ನೂ ವಿಶೇಷ ಅಂದ್ರೇ ಪದ್ಮಭೂಷಣ ಡಾ.ರಾಜಕುಮಾರ ನಟಿಸಿದ ಸಿನಿಮಾ ಹೆಸರನ್ನು ನೆನಪಿಟ್ಟು ಹೇಳುತ್ತಿದ್ದ ಶ್ರೀಶಾ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಪವರ್ ಸ್ಟಾರಗೂ ತಲುಪಿದ್ದು ಸ್ವತಃ ಪುನೀತ್ ರಾಜಕುಮಾರ್ ಮುದ್ದು ಬಾಲಕಿ ಶ್ರೀಶಾಳನ್ನು ಬೆಂಗಳೂರಿಗೆ ಕರೆಸಿ ಪ್ರೋತ್ಸಾಹ ತುಂಬಿದ್ದಾರೆ.
ಈ ಬಾಲಕಿ ಚಾತುರ್ಯಕ್ಕೆ ಈಗಾಗಲೇ ಇಂಡಿಯಾ ಬುಕ್ ಆಫ್ ರೆಕಾರ್ಡ್, ಎಕ್ಸಕ್ಲೂಸಿವ್ ವಲ್ಡ್ ರೆಕಾರ್ಡ್, ಕರ್ನಾಟಕ ಅಚಿವರ್ಸ್ ಆಫ್ ಬುಕ್ ರೆಕಾರ್ಡ್, ಪ್ಯೂಚರ್ ಕಲಾಮ್ ಬುಕ್ ಆಫ್ ರೆಕಾರ್ಡ್, ಸೇರಿ ಇತ್ತಿಚೇಗೆ ದ ಯುನಿವರ್ಸ್ ಅಚಿವರ್ಸ್ ಬುಕ್ ಆಫ್ ರೆಕಾರ್ಡ್ ಜೊತೆ ದ ಯುನಿವರ್ಸಲ್ ತಮಿಳು ಯುನಿವರ್ಸಿಟಿ ಡಾಕ್ಟರೇಟ್ ನೀಡಿದೆ.
ತನ್ನ ಆರನೇ ವಯಸ್ಸಿನಲ್ಲಿ ಡಾಕ್ಟರೇಟ್ ಪಡೆದ ಶ್ರೀಶಾ ತನ್ನ ಕುಟುಂಬವಷ್ಟೇ ಅಲ್ಲದೇ ತನ್ನೂರು ಕುಂದಗೋಳಕ್ಕೆ ಕೀರ್ತಿ ತಂದು ಅದೆಷ್ಟೋ ಮುದ್ದು ಮಕ್ಕಳಿಗೆ ಮಾದರಿ ಆಗಿದ್ದಾಳೆ.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್ ಕುಂದಗೋಳ
Kshetra Samachara
10/09/2021 11:18 am