ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: 75 ವರ್ಷದಿಂದ ಜೋಪಾನವಾಗಿದೆ ಈ ರಾಷ್ಟ್ರಧ್ವಜ

ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ

ಧಾರವಾಡ: ಅದು 1947ನೇ ಇಸ್ವಿ. ಆಗಸ್ಟ್ 15 ರಂದು ಮೊದಲ ಸ್ವಾತಂತ್ರ್ಯ ದಿನದ ಸಂಭ್ರಮಾಚರಣೆ ಮಾಡಿಕೊಳ್ಳಲಾಗುತ್ತಿತ್ತು. ಆ ದಿನ 13 ವರ್ಷದ ಪೋರನೊಬ್ಬ ನಾಲ್ಕಾಣೆ ಕೊಟ್ಟು ರಾಷ್ಟ್ರಧ್ವಜ ಖರೀದಿಸಿದ್ದ. ಅಂದು ಖರೀದಿಸಿದ್ದ ರಾಷ್ಟ್ರಧ್ವಜ ಇಂದಿಗೂ ಆತನ ಹತ್ತಿರ ಇದೆ. ಇದೀಗ ಆ ಬಾಲಕ 87 ವರ್ಷದ ಹಿರಿಯ ನಾಗರಿಕ.

ನೀವು ದೃಶ್ಯಗಳಲ್ಲಿ ನೋಡುತ್ತಿರುವ ಇವರ ಹೆಸರು ಗಂಗಾಧರ ಕುಲಕರ್ಣಿ. ಇವರು ಮೂಲತಃ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಗ್ರಾಮದವರು. ಭಾರತ ಬ್ರಿಟೀಷರ ದಾಸ್ಯದಿಂದ ಬಿಡುಗಡೆ ಹೊಂದಿದ ದಿನವದು. 13 ವರ್ಷದ ಬಾಲಕನಾಗಿದ್ದ ಗಂಗಾಧರ ಕುಲಕರ್ಣಿ, ತಮ್ಮ ಶಾಲೆಗೆ ಧಾರವಾಡ ತಾಲೂಕಿನ ಗರಗ ಗ್ರಾಮದಿಂದ ರಾಷ್ಟ್ರಧ್ವಜ ಮಾರಾಟಕ್ಕೆ ತೆಗೆದುಕೊಂಡು ಬಂದಿದ್ದಾರೆ ಎಂದು ಅರಿತು ನಾಲ್ಕಾಣೆ ಕೊಟ್ಟು ಅದನ್ನು ಖರೀದಿಸಿದ್ದರು. ಹೀಗೆ ಖರೀದಿಸಿದ್ದ ರಾಷ್ಟ್ರಧ್ವಜವನ್ನು ಗಂಗಾಧರ ಅವರು ಇನ್ನೂ ಜೋಪಾನವಾಗಿ ಕಾಪಾಡಿಕೊಂಡು ಬಂದು ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆಯಂದು ಅದನ್ನು ಆರೋಹಣ ಮಾಡುತ್ತಾರೆ.

ಗಂಗಾಧರ ಅವರು ಧಾರವಾಡದ ಸಹಾಯಕ ನಿರ್ದೇಶಕರು ಪಶು ವೈದ್ಯಾಧಿಕಾರಿಯಾಗಿ ನೇಮಕಗೊಂಡು ಧಾರವಾಡಕ್ಕೆ ಬಂದು ನೆಲೆಸಿ ಅನೇಕ ವರ್ಷ ಕಳೆದಿವೆ. ಈಗ ಅವರು ವೃತ್ತಿಯಿಂದ ನಿವೃತ್ತಿ ಕೂಡ ಆಗಿದ್ದಾರೆ. 2008ರವರೆಗೂ ಈ ಧ್ವಜವನ್ನು ತಮ್ಮ ತಾಯಿಯವರ ಬಳಿ ಬಿಟ್ಟು ಬಂದಿದ್ದ ಗಂಗಾಧರ ಅವರು, ತಮ್ಮ ತಾಯಿಯ ನಿಧನದ ನಂತರ ತಾವೇ ತಂದಿಟ್ಟುಕೊಂಡಿದ್ದಾರೆ. ಇದರ ಸಣ್ಣ ಕಹಾನಿಯನ್ನು ಅವರೇ ಹೇಳುತ್ತಾರೆ ಕೇಳಿ.

75 ವರ್ಷಗಳಿಂದ ಗಂಗಾಧರ ಅವರು ಈ ರಾಷ್ಟ್ರಧ್ವಜವನ್ನು ತಮಗಿಂತಲೂ ಹೆಚ್ಚು ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಅವರು ನಾಲ್ಕನೇ ತರಗತಿಯಲ್ಲಿದ್ದಾಗ ಇದನ್ನು ಅವರು ಕೊಂಡುಕೊಂಡಿದ್ದರಂತೆ. ಇಂದಿಗೂ ಈ ರಾಷ್ಟ್ರಧ್ವಜದ ಬಣ್ಣ ಮಾಸಿಲ್ಲ. ಅಷ್ಟು ಜೋಪಾನವಾಗಿ ಕಾಪಾಡಿಟ್ಟುಕೊಂಡು ಬಂದ ಗಂಗಾಧರ ಅವರಿಗೆ ನಾವೂ ಒಂದು ಸಲಾಂ ಹೇಳಲೇಬೇಕಲ್ಲವೇ?

Edited By : Manjunath H D
Kshetra Samachara

Kshetra Samachara

14/08/2021 05:43 pm

Cinque Terre

38.85 K

Cinque Terre

15

ಸಂಬಂಧಿತ ಸುದ್ದಿ