ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ನಿವೃತ್ತ ಯೋಧನಿಗೆ ಅದ್ದೂರಿ ಸ್ವಾಗತ

ಕಲಘಟಗಿ: ಕಳೆದ ‍17 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ನಂತರ ಸ್ವಗ್ರಾಮಕ್ಕೆ ಮರಳಿದ ಸೈನಿಕನಿಗೆ ತಾಲೂಕಿನ ಬಮ್ಮಿಗಟ್ಟಿ ಗ್ರಾಮದಲ್ಲಿ ಗ್ರಾಮಸ್ಥರು ಅದ್ದೂರಿ ಸ್ವಾಗತ ನೀಡಿ ಬರಮಾಡಿಕೊಂಡರು.

ಆ.1ರಂದು ಸೇವಾ ನಿವೃತ್ತಿಯಾಗಿ ತಾಲೂಕಿನ ಬಮ್ಮಿಗಟ್ಟಿ ಗ್ರಾಮಕ್ಕೆ ಬುಧವಾರ ಆಗಮಿಸಿದ ಯೋಧ ಮೆಹಬೂಬಸಾಬ್ ಬೆಲವಂತರ ಅವರಿಗೆ ಗ್ರಾಮಸ್ಥರು ಹಾಗೂ ಮಾಜಿ ಸೈನಿಕರು ಸೆಲ್ಯೂಟ್ ಹೊಡೆದು ಗೌರವ ಸೂಚಿಸಿದರು. ನಂತರ ಡೊಳ್ಳಿನ ಮೂಲಕ ಗ್ರಾಮದಲ್ಲಿ ಮೆರವಣಿಗೆ ನಡೆಯಿತು.

ನಿವೃತ್ತ ಯೋಧ ಮೆಹಬೂಬ್ ಸಾಬ್ ಬೆಲವಂತರ ಮಾತನಾಡಿ, ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸಿದ್ದೇನೆ ಎಂಬ ಹೆಮ್ಮೆ ನನಗಿದೆ 2004 ರಿಂದ ರಾಂಚಿ, ಜಮ್ಮು ಕಾಶ್ಮಿರ,ರಾಜಸ್ಥಾನ, ತಬಾಂಗ್ ಸೇರಿದಂತೆ ವಿವಿಧೆಡೆ 17 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ ಎಂದರು. ನಿವೃತ್ತಿ ನಂತರ ಊರಿಗೆ ಆಗಮಿಸಿದಾಗ ದೇಶಭಕ್ತರು ಸ್ವಾಗತ ನೀಡಿದ್ದು ನಾನು ಸೇನೆಯಲ್ಲಿ ಸೇವೆ ಸಲ್ಲಿಸಿದ್ದಕ್ಕೆ ಧನ್ಯತೆ ಭಾವ ಮೂಡಿಸಿದೆ ಎಂದರು.

ನಂತರ ಯೋಧನ ಮನೆಯ ಮುಂದೆ ಸ್ವಾಗತ ಕಾರ್ಯಕ್ರಮ ಆಯೋಜಿಸಿ ಮಾಜಿ ಸೈನಿಕರು,ಗ್ರಾಮ ಪಂಚಾಯತಿ ಸದಸ್ಯರು, ಸಂಘದ ಪದಾಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳು, ದೇಶಾಭಿಮಾನಿಗಳು ಯೋಧ ಮೆಹಬೂಬಸಾಬ್ ಅವರನ್ನು ಸನ್ಮಾನಿಸಿದರು.

Edited By : Manjunath H D
Kshetra Samachara

Kshetra Samachara

04/08/2021 07:29 pm

Cinque Terre

24.12 K

Cinque Terre

2

ಸಂಬಂಧಿತ ಸುದ್ದಿ