ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮೂರುಸಾವಿರ ಮಠದ ಹೋರಿಯ ಕಷ್ಟಕ್ಕೆ ಸ್ಪಂದಿಸಿದ ಕಾಶಪ್ಪ...!

ಹುಬ್ಬಳ್ಳಿ: ಮನೆಯಲ್ಲಿರುವ ಪ್ರಾಣಿಗಳಿಗೆ ಅನಾರೋಗ್ಯ ಆದರೆ ನಿಷ್ಕಾಳಜಿ ಮಾಡುವ ದಿನಮಾನಗಳಲ್ಲಿ ಇಲ್ಲೊಬ್ಬ ವ್ಯಕ್ತಿ ಮೂರುಸಾವಿರ ಮಠದ ಹೋರಿಗೆ ನಾಲು ಕಟ್ಟಿಸುವ ಮೂಲಕ ಮಾನವೀಯತೆ ಮೆರೆದಿದ್ದಾನೆ.

ಕಾಶಪ್ಪ ಬೀಜವಾಡ ಎಂಬುವ ಯುವಕನೇ ಮಾನವೀಯತೆ ಮೆರೆದಿದ್ದಾನೆ. ಮೂರುಸಾವಿರ ಮಠದ ಹೋರಿಗೆ ನಾಲು ಇಲ್ಲದೇ ನಡೆಯಲು ಸಾಧ್ಯವಾಗುತ್ತಿರಲಿಲ್ಲ ಅಲ್ಲದೇ ಕಾಲನ್ನು ಕೂಡ ಗಾಯ ಮಾಡಿಕೊಂಡಿತ್ತು. ಇದೇ ಸಂದರ್ಭದಲ್ಲಿ ನಾಲಬಂಧದವರನ್ನು ಕರೆದುಕೊಂಡು ಬಂದು ಹೋರಿಯ ಉದ್ದವಾದ ಕೊಳಗವನ್ನು ಕಟ್ ಮಾಡಿಸಿ ನಾಲ ಕಟ್ಟಿಸಿ ಹೋರಿಯ ನೋವಿಗೆ ಸ್ಪಂದಿಸಿದ್ದಾನೆ.

ಹುಬ್ಬಳ್ಳಿ ಮಹಾನಗರದಲ್ಲಿ ಯಾವುದೇ ದನಗಳಿಗೂ ತೊಂದರೆ ಆದರೇ ತಕ್ಷಣವೇ ಸ್ಪಂದಿಸುವ ವ್ಯಕ್ತಿ ಕಾಶಪ್ಪ ಬೀಜವಾಡ. ಒಟ್ಟಿನಲ್ಲಿ ಈ ಯುವಕನ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Edited By : Shivu K
Kshetra Samachara

Kshetra Samachara

03/08/2021 10:27 am

Cinque Terre

35.72 K

Cinque Terre

8

ಸಂಬಂಧಿತ ಸುದ್ದಿ