ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾನವೀಯತೆ ಮೆರೆದ ಅಬ್ಬಯ್ಯ

ಹುಬ್ಬಳ್ಳಿ: ಇಂದು ಬೆಳ್ಳಂಬೆಳಿಗ್ಗೆ ನೃಪತುಂಗ ಬೆಟ್ಟದ ಬಳಿಯ ಪಿರಾಮಿಡ್ ಧ್ಯಾನ ಮಂದಿರದ ಪಕ್ಕದ ಉದ್ಯಾನವನದಲ್ಲಿ ನಡೆದ ಘಟನೆಯೊಂದು ಶಾಸಕ ಪ್ರಸಾದ ಅಬ್ಬಯ್ಯ ಅವರ ಮಾನವೀಯ ಕಾರ್ಯಕ್ಕೆ ಸಾಕ್ಷಿಯಾಯಿತು. ಬೆಳಗ್ಗೆ ಉದ್ಯಾನವನದಲ್ಲಿ ಶಾಸಕರು ವಾಕಿಂಗ್ ಮಾಡುತ್ತಿದ್ದ ವೇಳೆ ತಾರುಣ್ಯ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಕ್ರೀಡಾ ತರಬೇತಿ ಪಡೆಯುತ್ತಿರುವ ತಮ್ಮ ಮಗನನ್ನು ಕರೆ ತರಲು ಬಂದಿದ್ದ ಪೋಷಕರಾದ ಮುತ್ತಣ್ಣ ಸುರಪುರ ಎಂಬುವವರು ಫಿಟ್ಸ್ ನಿಂದ ಕುಸಿದು ಬಿದ್ದಾಗ ತತಕ್ಷಣವೇ ಅವರ ನೆರವಿಗೆ ಧಾವಿಸಿದ ಶಾಸಕ ಅಬ್ಬಯ್ಯ ಅವರು ಕೂಡಲೇ ಆಟೋ ಒಂದನ್ನು ಕರೆಸಿ, ಮಗನ ಕೈಯಲ್ಲಿ ಕೊಂಚ ಹಣ ನೀಡಿ ಮುತ್ತಣ್ಣ ಅವರನ್ನು ಕಿಮ್ಸ್ ಆಸ್ಪತ್ರೆಗೆ ಕಳುಹಿಸಿದರು.

ನಂತರ ಕಿಮ್ಸ್ ವೈದ್ಯರಿಗೆ ಕರೆ ಮಾಡಿ ಸೂಕ್ತ ಚಿಕಿತ್ಸೆ ಕೈಗೊಳ್ಳುವಂತೆ ಸೂಚಿಸಿದರು. ಇದೀಗ ಅವರ ಆರೋಗ್ಯ ಚೇತರಿಸಿದ್ದು, ವೈದ್ಯರು ಮುತ್ತಣ್ಣ ಅವರನ್ನು ಮನೆಗೆ ಕಳುಹಿಸಿದ್ದಾರೆ.ಇವೆಲ್ಲ ಘಟನೆ ಶಾಸಕರ ಮಾನವೀಯ ಸೇವಾ ಕಾರ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

Edited By : Nirmala Aralikatti
Kshetra Samachara

Kshetra Samachara

24/02/2021 02:23 pm

Cinque Terre

22.69 K

Cinque Terre

8

ಸಂಬಂಧಿತ ಸುದ್ದಿ