ಹುಬ್ಬಳ್ಳಿ: ನವೆಂಬರ್ 1 ರಂದು ನಾಡಿನಾದ್ಯಂತ ಜ್ಞಾನ ಭಿಕ್ಷಾ ಪಾದಯಾತ್ರೆಯ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದ ಮಾನವತಾವಾದಿ ವಿವೇಕಾನಂದ ಎಚ್.ಕೆ ಅವರು 112 ದಿನಗಳ ತಮ್ಮ ಪಾದಯಾತ್ರೆಯನ್ನು ಮುಗಿಸಿ ಹುಬ್ಬಳ್ಳಿಗೆ ಆಗಮಿಸುತ್ತಿದ್ದಾರೆ ಎಂದು ಬಸವ ಸೇವಾ ಸಮಿತಿ ಮಾಜಿ ಅಧ್ಯಕ್ಷರಾದ ಡಾ. ಹೆಚ್.ವಿ ಬೆಳಗಲಿ ಹೇಳಿದರು.....
ಅದೇ ರೀತಿ ಇದೇ ಫೆ. 21 ರಂದು ನಗರದ ಲಿಂಗರಾಜ ನಗರದ ಲಿಂಗಾಯತ ಕಮ್ಯುನಿಟಿ ಹಾಲ್ ನಲ್ಲಿ ವಿಶ್ರಾಂತಿ ಮಾಡಿ, ನಂತರ ಸಾಯಂಕಾಲ 5.45 ಕ್ಕೆ ವಿದ್ಯಾನಗರ್ ಬನಶಂಕರಿ ದೇವಸ್ಥಾನದ ಹಿಂಬಾಗದಲ್ಲಿ ಸಾರ್ವಜನಿಕ ಸಮಾರಂಭವನ್ನು ಹಮ್ಮಿಕೊಂಡಿದೆ. ಅದೇರೀತಿ ಫೆ. 22 ರಂದು ಕನಕದಾಸ ಶಿಕ್ಷಣ ಸಂಸ್ಥೆಗೆ ಬಂದು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಮಾಡಲಿದ್ದಾರೆ. ಮತ್ತು ಅಂದೇ ಮಧ್ಯಾಹ್ನ 3 ಕ್ಕೆ ಟೆಂಡರ್ ಶೂರ್ ರಸ್ತೆಯಲ್ಲಿರುವ ಐಬಿಎಮ್ಆರ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು....
Kshetra Samachara
19/02/2021 12:33 pm