ಕುಂದಗೋಳ :ಹಳ್ಳಿಗಳಲ್ಲಿ ಇಂದಿಗೂ ಪ್ರಾಣಿಗಳ ಮೇಲಿನ ಪ್ರೀತಿ, ಪ್ರೇಮ, ಮಮತೆ ಜೀವಂತವಿದೆ ನೋಡಿ....
ಈ ಕಾರಣದಿಂದಲೇ ಹಳ್ಳಿಯ ಜನರು ಹಸು, ಎತ್ತು, ಆಕಳು, ಎಮ್ಮೆ, ಕುರಿ, ಮೇಕೆ ಒಂದಿಲ್ಲೊಂದು ಪ್ರಾಣಿಯನ್ನು ಸಾಕಿ ಸಲಹುತ್ತಾರೆ. ಹೀಗೆ ಮನೆಯಲ್ಲಿ ಕಳೆದ ಒಂದು ವರ್ಷದಿಂದ ಸಾಕಿ ಸಲುಹಿದ ಟಗರೊಂದು ಹೃದಯಾಘಾತದಿಂದ ಮೃತಪಟ್ಟಿದೆ. ಮೃತ ಟಗರಿಗೆ ಮನೆಯವರು ಗೌರವಪೂರ್ವಕವಾಗಿ ವಿಧಿ ವಿಧಾನದ ಮೂಲಕ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಈ ಘಟನೆ ನಡೆದಿರುವುದು ಕುಂದಗೋಳ ಮತಕ್ಷೇತ್ರದ ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಪ್ಲಾಟ್ ನಿವಾಸಿ ಅಶ್ವತ್ ಬೀಜವಾಡ ಅವರ ಮನೆಯಲ್ಲಿ. ಒಟ್ಟಾರೆ ಸತ್ತ ನಂತರವೂ ಕುರಿಗಾಹಿಯೊಬ್ಬರು ತನ್ನ ಪ್ರೀತಿಯ ಟಗರಿಗೆ ಅಂತ್ಯಕ್ರಿಯೆ ನೆರವೇರಿಸಿ ಕಂಬನಿ ಮಿಡಿದಿದ್ದಾರೆ. ಅವರ ಈ ಮಾನವೀಯತೆ ಅನೇಕರಿಗೆ ಮಾದರಿಯಾಗುವಂತಿದೆ.
Kshetra Samachara
08/02/2021 08:49 pm