ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: "ಕೂಲ್‌ ಕೂಲ್ ಹವಾ"- ನಿರಾಶ್ರಿತರಿಗೆ ಬೆಡ್ ಶೀಟ್ ವಿತರಿಸಿದ 'ಜೈ ಭೀಮ್'

ಹುಬ್ಬಳ್ಳಿ: ಈಗಾಗಲೇ ಚಳಿಗಾಲ ಆರಂಭವಾಗಿದೆ. ರಾತ್ರಿಯಿಂದ ಬೆಳಗ್ಗಿನ ವರೆಗೆ ಚಳಿಯೋ ಚಳಿ. ಅಂತಹದ್ದರಲ್ಲಿ ಈ ನಿರಾಶ್ರಿತರು ಚಳಿಯಲ್ಲೇ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹೀಗೆ ರಸ್ತೆ ಬದಿಯಲ್ಲಿ ಚಳಿಯಲ್ಲಿ ನಡುಗುತ್ತಾ ಮಲಗಿರುವುದನ್ನು ನೋಡಿದ ಜೈ ಭೀಮ್ ಸಂಘಟನೆ‌ ಪದಾಧಿಕಾರಿಗಳು, ಸದಸ್ಯರು ಪ್ರತಿ ನಿರ್ಗತಿಕರಿಗೆ ಬೆಡ್ ಶೀಟ್ ವಿತರಣೆ ಮಾಡಿದ್ದಾರೆ.

ಹುಬ್ಬಳ್ಳಿಯ ಚನ್ನಮ್ಮ ಸರ್ಕಲ್, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಕೋರ್ಟ್ ಸರ್ಕಲ್ ಸೇರಿದಂತೆ ಎಲ್ಲೆಲ್ಲಿ ನಿರಾಶ್ರಿತರು ಇದ್ದಾರೋ ಅವರನ್ನು ಗುರುತಿಸಿ ಇಡೀ ಜೈ ಭೀಮ್ ಸಂಘದ ಪದಾಧಿಕಾರಿಗಳು, ಸದಸ್ಯರು ಪ್ರತಿಯೊಬ್ಬರಿಗೂ ಬೆಡ್ ಶೀಟ್ ನೀಡಿ ಅವರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಸಂಘಟನೆಯ ಸಮಾಜಮುಖಿ ಕೆಲಸಕ್ಕೆ ಹುಬ್ಬಳ್ಳಿ ಜನರು ಪ್ರಶಂಸಿಸಿ ಅಭಿನಂದನೆ ಸಲ್ಲಿಸಿದ್ದಾರೆ.

Edited By : Ashok M
Kshetra Samachara

Kshetra Samachara

05/12/2024 03:54 pm

Cinque Terre

35.19 K

Cinque Terre

4

ಸಂಬಂಧಿತ ಸುದ್ದಿ