ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಹಲೋಕ ತ್ಯಜಿಸಿದ 'ರಾಣೇಬೆನ್ನೂರು ಹುಲಿ'

ಹಾವೇರಿ: ರಾಜ್ಯ ಮತ್ತು ಹೊರರಾಜ್ಯದ ಹೋರಿ ಓಡಿಸುವ ಅಖಾಡದಲ್ಲಿ 'ರಾಣೇಬೆನ್ನೂರು ಹುಲಿ' ಅಂದರೆ ಸಾಕು ಫೇಮಸ್. ಆದರೆ ಇವತ್ತು ಆ ಹೋರಿ ಅನಾರೋಗ್ಯದಿಂದ ಮೃತಪಟ್ಟಿದೆ.

ಹಾವೇರಿ ಜಿಲ್ಲೆ ರಾಣೆಬೆನ್ನೂರ ನಗರದ ಕುರುಬಗೇರಿಯ ದೆವ್ವ ಮರಿಯಪ್ಪ ಎಂಬವರು ಹತ್ತು ವರ್ಷಗಳ ಹಿಂದೆ ಈ ಹೋರಿಯನ್ನು ಖರೀದಿಸಿದ್ದರು. ಈ ಹೋರಿಯನ್ನ ಕೊಬ್ಬರಿ ಹೋರಿ ಓಡಿಸೋ ಅಖಾಡಕ್ಕೆ ಬಿಡುತ್ತಿದ್ದರು. ಮೊದಲಿನಿಂದಲೂ ಅಖಾಡದಿಂದಲೇ ಹೋರಿ ಸಾಕಷ್ಟು ಫೇಮಸ್ ಆಗಿತ್ತು. ಭಾಗವಹಿಸಿದ ಕಡೆಗಳಲೆಲ್ಲಾ ಧೂಳೆಬ್ಬಿಸಿಕೊಂಡು ಯಾರ ಕೈಗೂ ಸಿಗದಂತೆ ಓಡಿ ಅಭಿಮಾನಿಗಳ ಮನಸ್ಸು ಗೆದ್ದಿತ್ತು. 250 ಗ್ರಾಂ ಬಂಗಾರ, ಒಂದೂವರೆ ಕೆ.ಜಿ ಬೆಳ್ಳಿ, 17 ಬೈಕ್, ಫ್ರಿಡ್ಜ್, ಎತ್ತಿನ ಬಂಡಿಗಳು ಹೀಗೆ 10 ವರ್ಷದಲ್ಲಿ ನೂರಾರು ಬಹುಮಾನಗಳನ್ನ ಗೆದ್ದಿತ್ತು. ಹೀಗಾಗಿ ಒಂದು ಕೋಟಿಗೂ ಅಧಿಕ ಹಣ ಕೊಡುತ್ತೇವೆ ಅಂದರೂ ಮಾಲೀಕ ದೆವ್ವ ಮರಿಯಪ್ಪ ಅವರು ಮಾತ್ರ ಹೋರಿ ಕೊಟ್ಟಿರಲಿಲ್ಲ.

ಶಿವಮೊಗ್ಗ ಜಿಲ್ಲೆಯಲ್ಲಿ ಕೆಲವು ದಿನಗಳ ಹಿಂದಷ್ಟೆ ನಡೆದ ಹೋರಿ ಬೆದರಿಸುವ ಹಬ್ಬದಲ್ಲಿ ಭರ್ಜರಿಯಾಗಿ ಓಡಿತ್ತು. ಆದರೆ ಅವತ್ತು ಕೆಳಗೆ ಬಿದ್ದಿದ್ದ ಹೋರಿಯನ್ನು ಮಾಲೀಕರು ಆಸ್ಪತ್ರೆಗೆ ತೋರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಭಾನುವಾರ ತಡರಾತ್ರಿ ವೇಳೆಗೆ ಹೋರಿ ಬಾರದ ಲೋಕಕ್ಕೆ ತೆರಳಿದೆ.

ಈ ಆಘಾತಕಾರಿ ಹೋರಿ ಮಾಲೀಕರು ಹಾಗೂ ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸಿದೆ. ದೆವ್ವ ಮರಿಯಪ್ಪ ಅವರು ಹೋರಿಯನ್ನು ರಾಣೇಬೆನ್ನೂರು ನಗರದಲ್ಲಿ ಮೆರವಣಿಗೆ ಮಾಡುತ್ತಾ ತಮ್ಮ ಜಮೀನಿನಲ್ಲಿ ವಿಧಿವಿಧಾನಗಳ ಮೂಲಕವಾಗಿ ಅಂತ್ಯಕ್ರಿಯೆ ನೆರೆವೇರಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

08/02/2021 07:40 pm

Cinque Terre

17.56 K

Cinque Terre

1

ಸಂಬಂಧಿತ ಸುದ್ದಿ