ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸಿದ ಬಾಲಕ

ಧಾರವಾಡ: ಅಯೋಧ್ಯೆಯಲ್ಲಿ ತಲೆ ಎತ್ತಲಿರುವ ರಾಮಮಂದಿರ ನಿರ್ಮಾಣಕ್ಕೆ ಈಗಾಗಲೇ ಬಿಜೆಪಿ ಕಾರ್ಯಕರ್ತರು ನಿಧಿ ಸಂಗ್ರಹಣೆ ಮಾಡುತ್ತಿದ್ದಾರೆ. ಆದರೆ ಇಲ್ಲೊಬ್ಬ ಬಾಲಕ ತಾನೇ ಸ್ವಂತ ಹುಂಡಿ ನಿರ್ಮಿಸಿ ದೇಣಿಗೆ ಸಂಗ್ರಹಿಸುವ ಮೂಲಕ ರಾಮ ಮಂದಿರ ನಿರ್ಮಾಣಕ್ಕೆ ಆ ದೇಣಿಗೆ ನೀಡುವ ಕೆಲಸ ಮಾಡುತ್ತಿದ್ದಾನೆ.

ಈ ವೀಡಿಯೋದಲ್ಲಿ ಕಾಣುತ್ತಿರುವ ಬಾಲಕನ ಹೆಸರು ಪ್ರಭುರಾಜ ಪ್ರಭುನವರ ಧಾರವಾಡ ಸಂಗೊಳ್ಳಿ ರಾಯಣ್ಣ ನಗರದ ನಿವಾಸಿಗಳಾದ ನಿಂಗಪ್ಪ ಹಾಗೂ ಪುಷ್ಪಾ ಪ್ರಭುನವರ ಅವರ ಪುತ್ರ.

ರಾಮ ಮಂದಿರ ನಿರ್ಮಾಣಕ್ಕೆಂದು ತಾನೇ ಸ್ವಯಂ ಪ್ರೇರಣೆಯಿಂದ ಹುಂಡಿಯೊಂದನ್ನು ತಯಾರಿಸಿ ವಿವಿಧ ಬಡಾವಣೆಗಳಲ್ಲಿ ಹೋಗಿ ದೇಣಿಗೆ ಸಂಗ್ರಹಿಸಿದ್ದಾನೆ. ಸಣ್ಣ ವಯಸ್ಸಿನಲ್ಲಿ ಈ ಬಾಲಕ ಈ ರೀತಿಯ ಕಾರ್ಯ ಮಾಡುವುದರ ಮೂಲಕ ಗಮನ ಸೆಳೆದಿದ್ದಾನೆ.

Edited By : Manjunath H D
Kshetra Samachara

Kshetra Samachara

05/02/2021 11:50 am

Cinque Terre

36.03 K

Cinque Terre

7

ಸಂಬಂಧಿತ ಸುದ್ದಿ