ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ನೆರೆ ಸಂತ್ರಸ್ತ ಕುಟುಂಬದ ದಾರುಣ ಬದುಕಿನ ಕಥೆ

ಕಲಘಟಗಿ:ತಾಲೂಕಿನ‌ ನೆಲ್ಲಿಹರವಿ ಗ್ರಾಮದ ಬಸ್ ನಿಲ್ದಾಣವನ್ನೇ

ಮನೆ ಮಾಡಿಕೊಂಡ ನೆರೆ ಸಂತ್ರಸ್ತ ಕುಟುಂಬವೊಂದು ಕಣ್ಣಿರು ಹಾಕುವ ಬದುಕಿನ ಕಥೆ ಇದು.

ಬಸ್ ನಿಲ್ದಾಣವೇ ಮನೆಯಾಗಿದ್ದು ಯಾಕೆ ಅಂತಿರಾ ಹಾಗದರೇ ಈ ವರದಿ ನೋಡಿ.

ಹೌದು ! ಕಳೆದ ವರ್ಷ ಸುರಿದ ಮಳೆಯಿಂದಾಗಿ ವೀರಯ್ಯ ಬಡಿಗೇರ ಎನ್ನುವರ ಮನೆ ನೆಲಸಮವಾಗಿತ್ತು.ಮನೆ ಕಳೆದುಕೊಂಡು ಈ ಕುಟುಂಬ ಈಗ ಗ್ರಾಮದ ಬಸ್ ನಿಲ್ದಾಣದಲ್ಲಿ ‌ಆಶ್ರಯ ಪಡೆದಿದೆ.ಕೂಲಿ ಮಾಡಿ ಜೀವನ ಮಾಡುವ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ನೆರವು ನೀಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಿದ್ರು ಪ್ರಯೋಜನ ವಾಗಿಲ್ಲ.ಇದರಿಂದ ಕುಟುಂಬ ಈಗ ಕಣ್ಣಿನೀರಲ್ಲಿ ಕೈ ತೊಳೆಯುತ್ತಿದೆ.

ಕಳೆದ ವರ್ಷದ ವರುಣನ ರೌದ್ರನರ್ತನಕ್ಕೆ ಇವರ ಮನೆ ನೆಲಸಮವಾಗಿದೆ.ನೆರವು ನೀಡಬೇಕಿದ್ದ ಸರ್ಕಾರ ಈವರೆಗೆ ನೆರವಿಗೆ ಬಂದಿಲ್ಲ.ನೆತ್ತಿಯ ಮೇಲೊಂದು ಸೂರಿಲ್ಲದೆ ಈಗ ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆದಿದ್ದಾರೆ. ಬಸ್ ನಿಲ್ದಾಣವೆ ಆಶ್ರಯ ತಾಣವಾಗಿದ್ದು, ಇರುವ ಒಬ್ಬಳೆ ಮಗಳು ತುಂಬು ಗರ್ಭಿಣಿ.ಗರ್ಭಿಣಿ ಮಗಳನ್ನು ಇದೆ ಬಸ್ ನಿಲ್ದಾಣದಲ್ಲಿ ಉಳಿಸಿಕೊಂಡು ಕಣ್ಣೀರು ಹಾಕುತ್ತಾ ಜೀವನ ನಡೆಸುತ್ತಿದೆ‌‌ ಕುಟುಂಬ.

ವಯಸ್ಸಾಗಿರುವ ಈ ದಂಪತಿ ನಿತ್ಯ ಕೂಲಿ ಮಾಡಿದ್ರೆ ಮಾತ್ರ ಜೀವನ ಸಾಗಿಸಲು ಸಾಧ್ಯ ಇಂತಹ ಸಂಕಷ್ಟದ ನಡುವೆ ಇರುವ ಮನೆಯನ್ನು ಕಳೆದುಕೊಂಡು ಈಗ ಬೀದಿಯಲ್ಲಿದ್ದಾರೆ.

ನೆರವು ನೀಡುವಂತೆ ಸರ್ಕಾರಕ್ಕೆ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ರು,ಸರ್ಕಾರಕ್ಕೆ ನೆರೆ ಸಂತ್ರಸ್ತರ ನೋವು ಕಾಣದಾಗಿದೆ.ಇನ್ನಾದ್ರು ಸರ್ಕಾರ ಎಚ್ಚೆತ್ತುಕೊಂಡು ಮನೆ‌ ಕಳೆದುಕೊಂಡು ಬಸ್ ನಿಲ್ದಾಣದಲ್ಲಿ ವಾಸವಾಗಿರುವ ಕುಟುಂಬಕ್ಕೆ ನೆರವು ನೀಡಬೇಕಿದೆ.

Edited By : Nagesh Gaonkar
Kshetra Samachara

Kshetra Samachara

22/01/2021 08:33 am

Cinque Terre

52.46 K

Cinque Terre

8

ಸಂಬಂಧಿತ ಸುದ್ದಿ