ಕುಂದಗೋಳ :ಜಿಲ್ಲಾಧಿಕಾರಿಗಳ 81ನೇ ಸಭೆಯ ಆದೇಶದನ್ವಯ ಜಿಲ್ಲಾ ಕೇಂದ್ರ ಗ್ರಂಥಾಲಯ ಪ್ರಾಧಿಕಾರದ ಸದಸ್ಯರುಗಳು ಪಟ್ಟಣದ ಸಾರ್ವಜನಿಕ ಗ್ರಂಥಾಲಯಕ್ಕೆ ಇಂದು ಭೇಟಿ ನೀಡಿ ಪರಿವೀಕ್ಷಣೆ ಮಾಡಿದರು.
ಗ್ರಂಥಾಲಯದ ರಿಜಿಸ್ಟರ್ ಬುಕ್ ವಾತಾವರಣ ಪರಿಶೀಲನೆ ನಡೆಸಿದ ಖ್ಯಾತ ಸಾಹಿತಿ ಮಾಲತಿ ಪಟ್ಟಣಶೆಟ್ಟಿ ಪ್ರಶಂಸೆಯ ಮಾತನ್ನ ಆಡಿದರು.
ಓದುಗರನ್ನು ಕರೆದು ಗ್ರಂಥಾಲಯದ ಕುಂದು ಕೊರತೆಗಳ ಗ್ರಂಥಪಾಲಕ ಕರ್ತವ್ಯದ ಬಗ್ಗೆ ಪ್ರಶ್ನೇ ಮಾಡಿ ಸಲಹೆ ಪಡೆದುಕೊಂಡರು. ಬಳಿಕ ಗ್ರಂಥಪಾಲಕರಿಗೆ ಮುಂದಿನ ದಿನಗಳಲ್ಲಿ ಗ್ರಂಥಾಲಯದ ಅಭಿವೃದ್ಧಿ ಮತ್ತು ಓದುಗರ ಸಂಖ್ಯೆಯನ್ನು ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ವರದಿ ಬರೆದು ತಮ್ಮ ಹಸ್ತಾಕ್ಷರ ನೀಡಿದರು.
ಗ್ರಂಥಾಲಯದ ಪುಸ್ತಕ ವಿಭಾಗಕ್ಕೆ ಬೇಟಿ ನೀಡಿದ ಮುಖ್ಯ ಗ್ರಂಥಾಲಯ ಅಧಿಕಾರಿ ಹೇಮಾ ಸಾಲಗಟ್ಟಿ ಓದುಗರ ಆಸಕ್ತಿಗೆ ಸಂಬಂಧಿಸಿದಂತೆ ಹೆಚ್ಚಿನ ಪುಸ್ತಕ ನೀಡುವ ಭರವಸೆ ವ್ಯಕ್ತಪಡಿಸಿ ಗ್ರಂಥಾಲಯದ ಕಟ್ಟಡಕ್ಕೆ ಪೂರಕವಾದ ಸಾಮಗ್ರಿ ಒದಗಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಂಥಾಲಯ ಸಹಾಯಕ ನಿಜಾಮುದ್ದಿನ್ ಸೌದಾಗರ, ಪ್ರಥಮ ದರ್ಜೆ ಸಹಾಯಕ ಆನಂದ ಮುತ್ತಗಿ ಉಪಸ್ಥಿತರಿದ್ದರು.
Kshetra Samachara
06/01/2021 06:59 pm